Thursday, June 4, 2026
Homeಕರಾವಳಿನಾಳೆ ಮಳಲಿ ಮಸೀದಿ ಬಳಿಯ ರಾಮಾಂಜನೇಯ ದೇಗುಲದಲ್ಲಿ ತಾಂಬೂಲ ಪ್ರಶ್ನೆ ಹಿನ್ನೆಲೆ: ದೇಗುಲದ ಸುತ್ತಮುತ್ತ 144...

ನಾಳೆ ಮಳಲಿ ಮಸೀದಿ ಬಳಿಯ ರಾಮಾಂಜನೇಯ ದೇಗುಲದಲ್ಲಿ ತಾಂಬೂಲ ಪ್ರಶ್ನೆ ಹಿನ್ನೆಲೆ: ದೇಗುಲದ ಸುತ್ತಮುತ್ತ 144 ಸೆಕ್ಷನ್ ಜಾರಿ

- Advertisement -
- Advertisement -

ಮಂಗಳೂರು: ಮಂಗಳೂರಿನ ವಿವಾದಿತ ‌ಮಳಲಿ ಮಸೀದಿಯ ಅನತಿ ದೂರದಲ್ಲೇ ನಾಳೆ ತಾಂಬೂಲ ಪ್ರಶ್ನೆ ನಡೆಯಲಿದೆ. ಮಂಗಳೂರಿನ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯ ಕೆಲವೇ ಮೀಟರ್ ದೂರದ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆಗೆ ಸಿದ್ದತೆ ನಡೆದಿದೆ.

ಮಸೀದಿಯ 250 ಮೀ. ದೂರದಲ್ಲಿ ದೈವೀ ಶಕ್ತಿ ಪತ್ತೆ ಕಾರ್ಯಕ್ಕೆ ತಯಾರಿ ನಡೆದಿದ್ದು, ಬೆಳಿಗ್ಗೆ ಕೇರಳ ಮೂಲದ ಪೊದುವಾಲ್ ರಿಂದ ತಾಂಬೂಲ ಪ್ರಶ್ನೆ ನಡೆಯಲಿದೆ. ನಾಳೆ ಬೆ. 8 ರಿಂದ ಕೇರಳದ ಪೊದುವಾಳ್ ಗಳು ತಾಂಬೂಲ ಪ್ರಶ್ನೆ ಇಡಲಿದ್ದಾರೆ. ಈ ಹಿನ್ನೆಲೆ ದೇಗುಲದ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

- Advertisement -

Latest News

error: Content is protected !!