Sunday, May 12, 2024
Homeತಾಜಾ ಸುದ್ದಿ3 ಸಾವಿರ ರೂಪಾಯಿಗಾಗಿ ಹೋಯ್ತು ಇಬ್ಬರ ಪ್ರಾಣ

3 ಸಾವಿರ ರೂಪಾಯಿಗಾಗಿ ಹೋಯ್ತು ಇಬ್ಬರ ಪ್ರಾಣ

spot_img
- Advertisement -
- Advertisement -

ಚಿಕ್ಕಮಗಳೂರು : ಹಣ ಅನ್ನೋ ಮಾಯಾಂಗನೆ ಏನೆಲ್ಲಾ ಮಾಡಿಸಿ ಬಿಡುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಚಿಕ್ಕಮಗಳೂರಿನ ಚಿಕ್ಕಮಗಳೂರಿನ ಗಂಧರ್ವಗಿರಿ ಗ್ರಾಮದಲ್ಲಿ ಮೂರು ಸಾವಿರ ರೂಪಾಯಿ ಇಬ್ಬರ ಪ್ರಾಣಕ್ಕೇ ಕುತ್ತಾಗಿದೆ.

ಗಂಧರ್ವಗಿರಿ ಗ್ರಾಮದ ಬಸಪ್ಪ, ಆರು ತಿಂಗಳ ಹಿಂದೆ ಕೃಷ್ಣಪ್ಪ ಎಂಬಾತನಿಗೆ 3 ಸಾವಿರ ಸಾಲ ಕೊಟ್ಟಿದ್ದ. ಕೊಟ್ಟ ಸಾಲವನ್ನು ವಸೂಲಿ ಮಾಡದೆ ಬಿಡೋ ಜಾಯಮಾನ ಬಸಪ್ಪನದು ಆಗಿರಲಿಲ್ಲ. ಹಾಗಾಗಿ, ಕೃಷ್ಣಪ್ಪ ಸಾಲ ಕೊಡೋದು ತಡವಾಗಿದ್ದಕ್ಕೆ ಹತ್ತು ಬುಟ್ಟಿ ಮರಳು, ಹತ್ತು ಬುಟ್ಟಿ ಜಲ್ಲಿ 100 ಹೆಂಚುಗಳನ್ನ ಬಸಪ್ಪ ತೆಗೆದುಕೊಂಡು ಬಿಟ್ಟಿದ್ದ. ಆದರೂ ಈ ಬಸಪ್ಪನಿಗೆ ತೃಪ್ತಿ ಅನ್ನೋದೇ ಆಗಿರಲಿಲ್ಲ. ಸಾಲ ತೀರಿಲ್ಲ ಕೊಡು ಅಂತ ಖ್ಯಾತೆ ಮಾಡುತ್ತಲೇ ಇದ್ದ.

ಜೊತೆಗೆ ಬಸಪ್ಪನ ಕಾಫಿ ತೋಟದಲ್ಲಿದ್ದ ಬಾವಿಗೆ ಕೃಷ್ಣಪ್ಪ ನೀರಿಗಾಗಿ ಬರುತ್ತಿದ್ದ. ನನ್ನ ಕಾಫಿ ತೋಟದೊಳಗೆ ಯಾಕೋ ಬರ್ತೀಯಾ? ಅಂತ ಬಸಪ್ಪ ಆಗಾಗ ಕೃಷ್ಣಪ್ಪನ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ. ಅಷ್ಟೇ ಅಲ್ಲದೆ, ಹಲವು ಬಾರಿ ಕತ್ತಿ ತೆಗೆದುಕೊಂಡು ಕಡೀತಿನಿ, ಕಡೀತಿನಿ ಅಂತ ಅಂತ ಕೃಷ್ಣಪ್ಪನ ಮನೆಗೆ ಹೋಗಿ ಹೆದರಿಸುತ್ತಿದ್ದ.

ಮದ್ಯ ವ್ಯಸನಿಯೂ ಆಗಿದ್ದ ಬಸಪ್ಪ ಮಂಗಳವಾರ ಕೃಷ್ಣಪ್ಪ ಪೂಜೆಗೆಂದು ಬಾವಿ ಬಳಿ ನೀರು ತೆಗೆದುಕೊಳ್ಳಲು ಬಂದಾಗ ಹಿಂದಿನಿಂದ ಬಂದು ಕುತ್ತಿಗೆಗೆ ಮಚ್ಚು ಬೀಸಿದ್ದಾನೆ. ಆ ಬಳಿಕ ಜನರೆಲ್ಲಾ ಸೇರಿದ ಮೇಲೆ ತಾನು ಮನೆಗೆ ಹೋಗಿ ವಿಷ ಸೇವಿಸಿ ಒದ್ದಾಡಿ-ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ಸಂಬಂಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಚಿಕ್ಕಮಗಳೂರಿಂದ ಮುತ್ತೋಡಿಯ ಕಾಡಂಚಿನ ಈ ಗ್ರಾಮಕ್ಕೆ ಮಲ್ಲಂದೂರು ಪೊಲೀಸರು ಹೋಗುವಷ್ಟರಲ್ಲಿ ಎಲ್ಲಾ ಮುಗಿದು ಹೋಗಿತ್ತು. ಪೊಲೀಸರು ಒಂದೇ ಗಾಡಿಯಲ್ಲಿ ಇಬ್ಬರ ಮೃತದೇಹವನ್ನು ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಸಪ್ಪ ತನ್ನ ಪ್ರಾಣವನ್ನು ಕಳೆದುಕೊಂಡ, ಇಂದಲ್ಲ ನಾಳೆ ಸರಿ ಹೋಗುತ್ತಾನೆಂದು ಸೈಲೆಂಟಾಗಿದ್ದ ಕೃಷ್ಣಪ್ಪನ ಪ್ರಾಣವನ್ನೂ ತೆಗೆದ. ಈಗ ಎರಡು ಕುಟುಂಬಗಳು ಯಜಮಾನನಿಲ್ಲದೆ ಕಂಗಾಲಾಗಿವೆ. ಕೃಷ್ಣಪ್ಪನ ಮಡದಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿರೋದು ಮಾತ್ರ ದುರಂತ.

- Advertisement -
spot_img

Latest News

error: Content is protected !!