Wednesday, October 14, 2026
Homeತಾಜಾ ಸುದ್ದಿದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನ ಅವಾಂತರ: ಫ್ಲೈಟ್ ನಿಂದ ಕೆಳಗೆ ಹಾರುತ್ತೇನೆಂದು ಬೆದರಿಕೆ

ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನ ಅವಾಂತರ: ಫ್ಲೈಟ್ ನಿಂದ ಕೆಳಗೆ ಹಾರುತ್ತೇನೆಂದು ಬೆದರಿಕೆ

- Advertisement -
- Advertisement -

ಮಂಗಳೂರು;ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ.  

ಮೊಹಮ್ಮದ್ ಎಂಬವರು ಮೇ 8 ರಂದು ರಾತ್ರಿ ಏರ್‌ಇಂಡಿಯಾ ಎಕ್ಸ್ಪ್ರೆಸ್ ನಲ್ಲಿ ದುಬೈನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮರುದಿನ ಬೆಳಗ್ಗೆ 7.30 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ದುಬೈನಿಂದ ವಿಮಾನ ಹೊರಟ ನಂತರ ಮೊಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ನಂತರ ಹೊರಬಂದು ವಿಮಾನದ ಪ್ರಯಾಣಿಕರಲ್ಲದ ಕೃಷ್ಣ ಎಂಬವರ ಬಗ್ಗೆ ಸಿಬ್ಬಂದಿ ಬಳಿ ವಿಚಾರಿಸಿದ್ದರು. ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ವಿಮಾನದ ಸಿಬ್ಬಂದಿ ವರ್ಗದವರಿಗೆ ತೊಂದರೆ ನೀಡಿದ್ದರು.

ವಿಮಾನದಲ್ಲಿ ಪರಿಚಾರಕ ಸಿಬ್ಬಂದಿ ಅವರ ಹತ್ತಿರವಿದ್ದರೂ ಪದೇ – ಪದೇ ಕಾಲಿಂಗ್ ಬಟನ್ ಪ್ರೆಸ್ ಮಾಡಿ ತೊಂದರೆ ಮಾಡುತ್ತಿದ್ದ ಎನ್ನಲಾಗಿದೆ. ನಂತರ ವಿಮಾನದಲ್ಲಿದ್ದ ಲೈಫ್ ಜಾಕೆಟ್ ಅನ್ನು ತೆಗೆದು ಸಿಬ್ಬಂದಿಯ ಕೈಗೆ ನೀಡಿ, ವಿಮಾನ ಇಳಿದ ನಂತರ ಇದನ್ನು ಬಳಸುವುದಾಗಿ ತಿಳಿಸಿದ್ದನು.ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಕೆಳಕ್ಕೆ ಹಾರಬೇಕು ಎಂದು ಹೇಳಿ ತನ್ನ ಮತ್ತು ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾನೆ ಎ೦ದು ಏರ್‌ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿ ಸೆಕ್ಯೂರಿಟಿ ಕೋ- ಆಡಿನೇಟರ್‌ ಆಗಿರುವ ಸಿದ್ದಾರ್ಥದಾಸ್ ಏರ್ ಇಂಡಿಯಾ ಸಿಬ್ಬಂದಿ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!