Thursday, May 2, 2024
Homeತಾಜಾ ಸುದ್ದಿಗುಜರಾತ್: ಸೂರತ್ ONGC ಘಟಕದಲ್ಲಿ ಅಗ್ನಿ ಅವಘಢ

ಗುಜರಾತ್: ಸೂರತ್ ONGC ಘಟಕದಲ್ಲಿ ಅಗ್ನಿ ಅವಘಢ

spot_img
- Advertisement -
- Advertisement -

ಅಹಮದಾಬಾದ್​: ಗುಜರಾತ್​ನ ಸೂರತ್​ನಲ್ಲಿರುವ ಆಯಿಲ್ ಆಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್​ (ಒಎನ್​ಜಿಸಿ) ಘಟಕದಲ್ಲಿ ಇಂದು ನಸುಕಿನ ವೇಳೆ ಸರಣಿ ಸ್ಫೋಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಚಾಚಿಕೊಂಡಿದೆ.

ಮುಂಜಾನೆ 2.30ರ ಸುಮಾರಿಗೆ ಒಎನ್‌ಜಿಸಿ ಹಜೀರಾ ಪ್ಲಾಂಟ್‌ನಲ್ಲಿ 3 ಸರಣಿ ಸ್ಫೋಟಗಳು ಸಂಭವಿಸಿದವು. ಸ್ಫೋಟದ ಸದ್ದು 4 ಕಿಲೋ ಮೀಟರ್ ದೂರದ ತನಕ ಕೇಳಿಸಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ವರದಿಯಾಗಿದೆ. ಸದ್ಯ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಾವರದಲ್ಲಿನ ಅನಿಲದ ಒತ್ತಡವನ್ನು ನಿಗ್ರಹಿಸಲು ಒಎನ್‌ಜಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರ ಡಾ. ಸೂರತ್‌ಗಾಗಿ ತಿಳಿಸಿದ್ದಾರೆ.

ಸುಮಾರು ಹತ್ತು ಕಿಲೋಮೀಟರ್ ದೂರಕ್ಕೆ ಅನಿಲದ ವಾಸನೆ ಹರಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ದುರಂತಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದೆ.

- Advertisement -
spot_img

Latest News

error: Content is protected !!