Thursday, June 4, 2026
Homeತಾಜಾ ಸುದ್ದಿನಾಳೆಯಿಂದ ಚಂಡೀಗಢದಲ್ಲಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ 47ನೇ ಜಿಎಸ್‌ಟಿ ಕೌನ್ಸಿಲ್ ‌ಸಭೆ

ನಾಳೆಯಿಂದ ಚಂಡೀಗಢದಲ್ಲಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ 47ನೇ ಜಿಎಸ್‌ಟಿ ಕೌನ್ಸಿಲ್ ‌ಸಭೆ

- Advertisement -
- Advertisement -

ಬೆಂಗಳೂರು: ಜೂನ್ 28 ಹಾಗೂ 29 ರಂದು 47ನೇ ಜಿಎಸ್ ಟಿ. ಕೌನ್ಸಿಲ್ ಸಭೆ ಚಂಡೀಗಡದಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಬೆಂಗಳೂರಿನಿಂದ ಚಂಡೀಗಢಕ್ಕೆ ತೆರಳಿದ್ದಾರೆ.

ಜಿಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ ಆಫ್ ಮಿನಿಸ್ಟರ್ ಸಭೆ ಈಗಾಗಲೇ ಮೂರು ಬಾರಿ ನಡೆದಿದೆ.

ನಾಳೆಯಿಂದ ನಡೆಯುವ ಸಭೆಯಲ್ಲಿ ಜಿಎಸ್ ಟಿ ತೆರಿಗೆ ಕುರಿತು ಮಧ್ಯಂತರ ವರದಿಯನ್ನು ಸಲ್ಲಿಸಲ್ಪಡುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ದೊರೆಯುತ್ತಿರುವ ಜಿಎಸ್ ಟಿ ಪರಿಹಾರ ಈ ವರ್ಷ ಅಂತ್ಯವಾಗಲಿದ್ದು, ಈ ಬಗ್ಗೆ ನಾಳೆಯ ಸಭೆಯಲ್ಲಿ ಅಂತಿಮ ತೀರ್ಮಾನ ಆಗುವ ನಿರೀಕ್ಷೆ ಇದೆ.

ಎರಡು ದಿನಗಳ ಸಭೆಯ ನಂತರ ಜೂನ್ 30 ರಂದು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

- Advertisement -

Latest News

error: Content is protected !!