Sunday, April 28, 2024
Homeಕರಾವಳಿಉರ್ವ ಸ್ಟೋರ್‌ನಲ್ಲಿರುವ ದ.ಕ.‌ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 2 ಕೋಟಿ ರೂ. ಅನುದಾನ: ಸಮಾಜ...

ಉರ್ವ ಸ್ಟೋರ್‌ನಲ್ಲಿರುವ ದ.ಕ.‌ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 2 ಕೋಟಿ ರೂ. ಅನುದಾನ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

spot_img
- Advertisement -
- Advertisement -

ಮಂಗಳೂರು: ಉರ್ವಸ್ಟೋರ್‌ನಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಕೆಲವೊಂದು ಸೌಕರ್ಯವನ್ನು ಕಲ್ಪಿಸುವ ದೃಷ್ಟಿಯಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಹೇಳಿಕೆ ನೀಡಿದ ಸಚಿವರು, ಅಂಬೇಡ್ಕರ್ ಭವನ ಉದ್ಘಾಟನೆಯಾದ ಬಳಿಕ ಕೆಲವೊಂದು ವ್ಯವಸ್ಥೆ ಬಾಕಿಯಿದ್ದ ಕಾರಣದಿಂದ ಸಾರ್ವಜನಿಕರಿಗೆ ಲಭ್ಯವಿರಲಿಲ್ಲ. ಇದನ್ನು ಮನಗಂಡು ಮಂಗಳೂರು ಮೇಯರ್, ಉಪಮೇಯರ್, ಹಿರಿಯ ಅಧಿಕಾರಿಗಳ ಜತೆ ಅಂಬೇಡ್ಕರ್ ಭವನ ಪರಿಶೀಲನೆ ನಡೆಸಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಭವನವನ್ನು ಮತ್ತಷ್ಟು ಸುಸಜ್ಜಿತಗೊಳಿಸಿ ಸಾರ್ವಜನಿಕ ಸಮಾರಂಭಗಳಿಗೆ ಬಿಟ್ಟುಕೊಡುವ ದೃಷ್ಟಿಯಿಂದ ಯೋಜನೆ ರೂಪಿಸಲಾಗಿದೆ. ವೇದಿಕೆಗೆ ಸುವ್ಯವಸ್ಥಿತ ನೆಲಹಾಸು, ಪರದೆ ವ್ಯವಸ್ಥೆ, ಲೈಟಿಂಗ್ ಮತ್ತು ಸೌಂಡ್ ಸಿಸ್ಟಂ, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ನಾನಾ ಕಾರ್ಯಕ್ಕೆ ಅಂದಾಜು 2 ಕೋಟಿ ರೂಪಾಯಿ ಯೋಜನಾ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದಕ್ಕೆ ಮಹಾನಗರಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನ ಮತ್ತು ರಾಜ್ಯ ಸರಕಾರದಿಂದಲೂ ಅನುದಾನ ನೀಡಲಾಗುವುದು. ಮುಂದಿನ 2 ತಿಂಗಳೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಭಾಭವನ ಬಿಟ್ಟುಕೊಡುವ ಉದ್ದೇಶ ಹೊಂದಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಭವ್ಯವಾದ ಭವನ ನಿರ್ಮಾಣ ನಗರದ ಹೃದಯಭಾಗದಲ್ಲೇ ಇದ್ದು, ಎಲ್ಲ ಮೂಲಭೂತ ಸೌಕರ್ಯಗಳನ್ನೊಳಗೊಂಡಿದೆ. ನಗರದ ಪುರಭವನಕ್ಕೆ ಪರ್ಯಾಯ ರೀತಿಯಲ್ಲಿ ಈ ಭವನ ಗಮನ ಸೆಳೆಯುತ್ತಿದ್ದು, 2 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಅಂಬೇಡ್ಕರ್ ಭವನ ಬಾಡಿಗೆಗೆ ಸಂಬಂಧಪಟ್ಟಂತೆ ಮಹಾನಗರಪಾಲಿಕೆ ಈಗಾಗಲೇ ಒಂದು ನಿಯಮಗಳನ್ನು ರೂಪಿಸಿದ್ದು, ಪುರಭವನಕ್ಕೆ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಉಳಿದಂತೆ ಮುಂದಿನ ದಿನಗಳಲ್ಲಿ ಸರಕಾರಿ ಇಲಾಖೆಯ ಕಾರ್ಯಕ್ರಮಗಳು ಕೂಡಾ ಇಲ್ಲೇ ನಡೆಸುವ ಬಗ್ಗೆಯೂ ಚಿಂತನೆಯಿದೆ. ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಮತ್ತಷ್ಟು ಮೆರುಗು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಅಂಬೇಡ್ಕರ್ ಭವನ ಮಂಗಳೂರು ಮಹಾನಗರಕ್ಕೆ ಬಹುದೊಡ್ಡ ಆಸ್ತಿಯಾಗಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗೇಶ್ ಬೇವಿನಕಟ್ಟಿ, ಕಾರ್ಪೊರೇಟರ್ ಗಣೇಶ್ ಕುಲಾಲ್, ಇಂಜಿನಿಯರ್ ನರೇಶ್ ಶೆಣೈ, ಅಂಬೇಡ್ಕರ್ ಭವನ ವ್ಯವಸ್ಥಾನಾ ಸಮಿತಿ ಸದಸ್ಯ ವಿನಯ್‌ನೇತ್ರ ದಡ್ಡಲ್‌ಕಾಡ್, ದಲಿತ ದೌರ್ಜನ್ಯ ವಿರೋಧಿ ಸಮಿತಿ ವಿಶ್ವನಾಥ್ ಚೆಂತಿಮಾರ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!