Tuesday, July 14, 2026
Homeಕರಾವಳಿಹಳೆಯಂಗಡಿಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಹಳೆಯಂಗಡಿಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳ ಸ್ಥಿತಿ ಗಂಭೀರ

- Advertisement -
- Advertisement -

ಮೂಲ್ಕಿ: ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಸಿಡಿಲು ಬಡಿದ ಘಟನೆ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿ ನಡೆದಿದೆ. ಇನ್ನು ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದೆ ಅಂತಾ ಹೇಳಲಾಗಿದೆ.

ಇಲ್ಲಿನ ಇಂದಿರಾನಗರದ ಬೊಳ್ಳೂರು ಮಸೀದಿ ಹಿಂಭಾಗದ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಮನ್ಸೂರ್ ಎಂಬುವರ ಮಗ ನಿಹಾನ್ (5) ಹಾಗೂ ಗಂಗಾವತಿ ಮೂಲದ ದುರ್ಗಪ್ಪ ಎಂಬುವವರ ಮಗ ಮಾರುತಿ (6) ಗೆ ಸಿಡಿಲು ಬಡಿದಿದೆ. ಕೂಡಲೇ ಇಬ್ಬರೂ ಮೂರ್ಛೆ ಹೋಗಿದ್ದಾರೆ. ತಕ್ಷಣ ಸ್ಥಳೀಯರ ಸಹಾಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು ವೈದ್ಯರ ತಂಡ ಮಕ್ಕಳಿಗೆ ಕೃತಕ ಉಸಿರಾಟ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!