Friday, June 5, 2026
Homeಕರಾವಳಿಪುತ್ತೂರಿನ ಕೆಯ್ಯೂರಿನಲ್ಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಪುತ್ತೂರಿನ ಕೆಯ್ಯೂರಿನಲ್ಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆ

- Advertisement -
- Advertisement -

ಪುತ್ತೂರು: ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ಎಂಬಲ್ಲಿ ನಡೆದಿದೆ.

ಪಲ್ಲತ್ತಡ್ಕ ನಿವಾಸಿ ಬೇಡು ಎಂಬವರ ಪುತ್ರ ಚಂದ್ರಶೇಖರ(19) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕಾರ್ಮಿಕರಾಗಿರುವ ಚಂದ್ರಶೇಖರ ಅವರು ಎಂದಿನಂತೆ ಮನೆಯಿಂದ ಬೆಳಗ್ಗೆ ಕೂಲಿ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಮನೆಗೆ ಹಿಂದಿರುಗದೆ ಪಲ್ಲತಡ್ಕ ಸಮೀಪದ ಕಾಪುತಡ್ಕ ಎಂಬಲ್ಲಿರುವ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆತ್ಮಹತ್ಯೆಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ.

- Advertisement -

Latest News

error: Content is protected !!