Wednesday, June 24, 2026
Homeತಾಜಾ ಸುದ್ದಿನಡುರಸ್ತೆಯಲ್ಲಿ ಪಲ್ಟಿಯಾದ ಬಿಯರ್ ಲಾರಿ : ಕೊರೊನಾ ಮರೆತು ಬಾಟಲಿಗಾಗಿ ಮುಗಿಬಿದ್ದ ಜನ

ನಡುರಸ್ತೆಯಲ್ಲಿ ಪಲ್ಟಿಯಾದ ಬಿಯರ್ ಲಾರಿ : ಕೊರೊನಾ ಮರೆತು ಬಾಟಲಿಗಾಗಿ ಮುಗಿಬಿದ್ದ ಜನ

- Advertisement -
- Advertisement -

ಚಿಕ್ಕಮಗಳೂರು: ಬಿಯರ್​ ಬಾಟಲಿ ತುಂಬಿಕೊಂಡು ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಶಿವಮೊಗ್ಗ-ತರಿಕೇರಿ ರಸ್ತೆಯಲ್ಲಿ ಬರುವ ಎಂ.ಸಿ.ಹಳ್ಳಿ ನಡೆದಿದೆ.

ಲಾರಿ ಪಲ್ಟಿಯಾದ ವಿಚಾರ ಗೊತ್ತಾಗುತ್ತಿದ್ದಂತೆ ಎಂ.ಸಿ.ಹಳ್ಳಿ ಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಸಾವಿರಾರು ಮಂದಿ ಪಲ್ಟಿಯಾದ ಲಾರಿಯಿಂದ ಬಿಯರ್‌ ಬಾಟಲಿಗಳನ್ನು ಸಿಕ್ಕಿದ ಹಾಗೇ ದೋಚಿಕೊಂಡು ಹೋಗಿದ್ದಾರೆ .

ಇನ್ನೂ ಅಪಘಾತದಲ್ಲಿ ಸಿಕ್ಕಿ ಬಿದ್ದ ಲಾರಿ ಡೈವರ್‌ ಅನ್ನು ಕೂಡ ಸ್ಥಳದಲ್ಲಿದ್ದ ಜನರು ಕಾಪಾಡದೇ ತಮ್ಮ ಪಾಡಿಗೆ ತಾವು ಸಿಕ್ಕಿದೆ ಛಾನ್ಸ್‌ ಅಂತ ಬಿಯರ್‌ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ತರಿಕೇರಿ ಪೊಲೀಸರು ಸ್ಥಳಕ್ಕೆ ಬಂದ್ರು ಕೂಡ ಪೋಲಿಸರಿಗೂ ಕೂಡ ಸ್ಥಳದಲ್ಲಿದ್ದ ಜನತೆ ಸರ್‌ ಬೇಕಾದ್ರೆ ನೀವು ತಗೊಂಡು ಹೋಗಿ ಇದೊಂದು ಸಾರಿ ಬಿಟ್ಟು ಬಿಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದಲ್ಲದೇ ಜನರನ್ನ ಚದುರಿಸಲು ಪೊಲೀಸರು ಹೈರಾಣಾಗಿ ಹೋದರು, ಕೊನೆಗೆ ಲಾರಿಯಲ್ಲಿದ್ದ ಬಾಟಲಿಗಳು ಖಾಲಿಯಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!