Saturday, June 6, 2026
Homeಕರಾವಳಿಕಾಸರಗೋಡು: ಎಂಡೋ ಸಲ್ಫಾನ್ ಗೆ ಇಬ್ಬರು ಮಕ್ಕಳು ಬಲಿ..!

ಕಾಸರಗೋಡು: ಎಂಡೋ ಸಲ್ಫಾನ್ ಗೆ ಇಬ್ಬರು ಮಕ್ಕಳು ಬಲಿ..!

- Advertisement -
- Advertisement -

ಕಾಸರಗೋಡು: ಎಂಡೋ ಸಲ್ಫಾನ್ ಸಂತ್ರಸ್ತ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕಾಞ೦ಗಾಡ್‌‌ನಲ್ಲಿ ನಡೆದಿದೆ. ಕಾಞ೦ಗಾಡ್ ತಾಯನ್ನೂರಿನ ಮನು ಎಂಬವರ ಪುತ್ರಿ ಅಮಯ್ (5) ಮತ್ತು ನೀಲೇಶ್ವರ ತೈಕಡಪ್ಪುರದ ಮೊಯ್ದುರವರ ಪುತ್ರ ಮುಹಮ್ಮದ್ ಇಸ್ಮಾಯಿಲ್ (10) ಮೃತಪಟ್ಟವರು.

ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳಿಗೆ ಕೆಲ ಸಮಯಗಳಿಂದ ಸರಕಾರದ ವತಿಯಿಂದ ಸೂಕ್ತ ಚಿಕಿತ್ಸಾ ಸೌಲಭ್ಯ ಲಭಿಸಿರಲಿಲ್ಲ ಎನ್ನಲಾಗಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಮೃತಪಟ್ಟಿದ್ದಾರೆ.

ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆ ಪರಿಣಾಮ ಹಲವಾರು ಮಕ್ಕಳು ರೋಗಳಗಳಿಗೆ ತುತ್ತಾಗಿದ್ದು, ಈ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಲಭಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

- Advertisement -

Latest News

error: Content is protected !!