Friday, June 5, 2026
Homeಕರಾವಳಿಮಂಗಳೂರು: ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು- ಮ.ನ.ಪಾ ಕಚೇರಿಯ ಮುಂದೆ ಇಂದು ಧರಣಿ

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವು- ಮ.ನ.ಪಾ ಕಚೇರಿಯ ಮುಂದೆ ಇಂದು ಧರಣಿ

- Advertisement -
- Advertisement -

ಮಂಗಳೂರು: ಕಳೆದ ಕೆಲವು ದಿನಗಳಿಂದ ಮ.ನ.ಪಾ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಮಾಡುತ್ತಿರುವುದನ್ನು ಖಂಡಿಸಿ ಬೀದಿ ಬದಿ ವ್ಯಾಪಾರಸ್ಥರು ಮ.ನ.ಪಾ ಕಚೇರಿಯ ಮುಂದೆ ಇಂದು ಧರಣಿ ನಡೆಸಿದ್ದಾರೆ.

ನಗರದ ಪುರಭವನ ಬಳಿ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಯ ಪೆಟ್ಟಿಗೆ ಅಂಗಡಿಯನ್ನು ಇಂದು ಬೆಳಗ್ಗೆ ತೆರವುಗೊಳಿಸುವ ಸಂದರ್ಭ ನಜ್ಜುಗುಜ್ಜುಗೊಳಿಸಿದ್ದರು.

ಇದನ್ನು ಖಂಡಿಸಿ ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ)ದ ನೇತೃತ್ವದಲ್ಲಿ ವ್ಯಾಪಾರಿಗಳು ಮ.ನ.ಪಾ ಕಚೇರಿಯ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನ್ಯಾಯಕ್ಕಾಗಿ ಆಗ್ರಹಿಸಿದರು.

- Advertisement -

Latest News

error: Content is protected !!