Sunday, May 5, 2024
Homeಕರಾವಳಿಮಂಗಳೂರು: ರಾಜ್ಯದಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ- ದಕ್ಷಿಣ ಕನ್ನಡದಲ್ಲಿ 36 ಚೆಕ್ ಪೊಸ್ಟ್ ಹಾಕಲು ಸೂಚನೆ...!

ಮಂಗಳೂರು: ರಾಜ್ಯದಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ- ದಕ್ಷಿಣ ಕನ್ನಡದಲ್ಲಿ 36 ಚೆಕ್ ಪೊಸ್ಟ್ ಹಾಕಲು ಸೂಚನೆ…!

spot_img
- Advertisement -
- Advertisement -

ಮಂಗಳೂರು: ರಾಜ್ಯದಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಿಗಿ ಭದ್ರತೆ ಬಗ್ಗೆ ಮಂಗಳೂರು ಪೊಲೀಸ್​ ಕಮಿಷನರ್​ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಕೇರಳ ರಾಜ್ಯದ ಜೊತೆ ಸಾಕಷ್ಟು ರೀತಿಯಲ್ಲಿ ಸಂಪರ್ಕ ಹೊಂದಿದೆ. ಮುಖ್ಯ ರಸ್ತೆ ಹೊರತು ಪಡಿಸಿ ಕಾಲುದಾರಿ ಮೂಲಕ‌ ಕೇರಳ ಜೊತೆ ಸಂಪರ್ಕವಿದೆ. ಜಿಲ್ಲೆಯನ್ನ ಸಂಪರ್ಕಿಸುವ 7 ರಸ್ತೆಗಳು ಕಮೀಷನರೇಟ್ ವ್ಯಾಪ್ತಿಯಲ್ಲಿವೆ. ಅತೀ ಮುಖ್ಯವಾದ ತಲಪಾಡಿ ಚೆಕ್ ಪೋಸ್ಟ್​ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ನು ನೈಟ್ ಕರ್ಫ್ಯೂ ವೇಳೆಯಲ್ಲಿ ಅನಾವಶ್ಯಕವಾಗಿ ಯಾರು ಸಂಚಾರ ಮಾಡುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಓಡಾಟ ಮಾಡುವವರಿಗೆ ಗುರುತಿನ ಚೀಟಿ ಕಡ್ಡಾಯ. ರೈಲ್ವೆ, ಏರ್​ಪೋರ್ಟ್​ಗೆ ಹೋಗುವವರು ಟಿಕೆಟ್ ತೋರಿಸಿ ಸಂಚರಿಸಿ. ನಗರದಲ್ಲಿ ಒಟ್ಟು 36 ಚೆಕ್ ಪೊಸ್ಟ್ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ತುಂಬಾ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ಹೇರಲಾಗುವುದು ಎಂದಿದ್ದಾರೆ.

- Advertisement -
spot_img

Latest News

error: Content is protected !!