Thursday, June 4, 2026
Homeತಾಜಾ ಸುದ್ದಿಯುವಕನ ಕೈಗೆ ಮಹಿಳೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್: ಪ್ರೇಯಸಿಯ ಮಗುವನ್ನು ಅಪರಿಚಿತರ ಮಗುವೆಂದು...

ಯುವಕನ ಕೈಗೆ ಮಹಿಳೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್: ಪ್ರೇಯಸಿಯ ಮಗುವನ್ನು ಅಪರಿಚಿತರ ಮಗುವೆಂದು ಕಥೆ ಕಟ್ಟಿದ ಚಾಲಕಿ

- Advertisement -
- Advertisement -

ಮೈಸೂರು:  ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಯುವಕನ ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.  ಲಷ್ಕರ್ ಠಾಣಾ ಪೊಲೀಸರು ಸತ್ಯ ಬಯಲು ಮಾಡಿದ್ದು, ಕಳ್ಳ ಪ್ರೇಮಿಗಳು ತಮ್ಮ ಪ್ರೀತಿಗೆ ಅಡ್ಡಿಯಾದ ಮಗುವನ್ನು ಅನಾಥ ಮಗುವೆಂದು ಬಿಂಬಿಸಿದ್ದಾರೆ ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ.

ಎರಡು ವಾರದ ಹಿಂದೆ ಮಹಿಳೆಯೊಬ್ಬರು ತನ್ನ ಕೈಗೆ ಮಗುಕೊಟ್ಟು ಮತ್ತೆ ಬರಲೇ ಇಲ್ಲ ಎಂದು ಕಥೆ ಕಟ್ಟಿದ್ದ ರಘು ತಾನು ಪ್ರೀತಿಸಿದ ಮಹಿಳೆ ಜೊತೆ ವಿವಾಹವಾಗಲು ಈ ಮಗು ಅಡ್ಡ ಬರುತ್ತಿದೆ ಎಂದು ತನ್ನ ಪ್ರೇಯಸಿಯ ಮಗುವನ್ನೇ ಅನಾಥವೆಂದು ಬಿಂಬಿಸಿದ್ದಾನೆ. ಸದ್ಯ ಪ್ರಕರಣ ಭೇದಿಸಿದ ಪೊಲೀಸರು ಕಳ್ಳ ಪ್ರೇಮಿಗಳ ಆಟ ಬಯಲು ಮಾಡಿದ್ದಾರೆ. 

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಯುವಕ ರಘು, ಅಪರಿಚಿತ ಮಹಿಳೆ ಬಸ್ ಸ್ಟ್ಯಾಂಡ್ ನಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾದಳು. ದಾರಿ ಕಾಣದೆ ಮೈಸೂರಿಗೆ ತಂದಿರುವುದಾಗಿ ಕಥೆ ಕಟ್ಟಿದ್ದ. ಮಗುವಿನ ಪರಿಸ್ಥಿತಿಗೆ ಮರುಗಿ ತಾಯಿಯನ್ನು ಹುಡುಕಿದ ಪೊಲೀಸರು ಮಹಿಳೆಯಿಂದ ಸ್ಫೋಟಕ ಮಾಹಿತಿ ಕಲೆ ಹಾಕಿದ್ದಾರೆ. ರಘು ಹಾಗೂ ಮಹಿಳೆ ನಡುವೆ ಪ್ರೀತಿ ಇತ್ತು. ಇಬ್ಬರ ನಡುವಿನ ಪ್ರೀತಿಗೆ ತನ್ನ ಮಗು ಅಡ್ಡಿಯಾದ ಹಿನ್ನೆಲೆ ಮಗು ದೂರ ಮಾಡಲು ಇವರಿಬ್ಬರೂ ಸೇರಿ ಪ್ಲ್ಯಾನ್ ಮಾಡಿ ಈ ರೀತಿಯ ನಾಟಕ ಆಡಿದ್ದಾರೆ. ಮಹಿಳೆ ಮೂಲತಃ ರಾಯಚೂರಿನವರು. ವಿವಾಹಿತ ಮಹಿಳೆಯನ್ನ ರಘು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ಒಡನಾಟ ಇತ್ತು. ವಿವಾಹಿತ ಮಹಿಳೆಗೆ ಗಂಡು ಮಗು ಇತ್ತು. ಪತಿಯಿಂದ ದೂರವಾಗಿದ್ದ ಮಹಿಳೆ ಮಗುವನ್ನ ದೂರ ಮಾಡಿಕೊಂಡು ರಘು ಜೊತೆ ಮದುವೆಯಾಗಲು ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಇವರಿಬ್ಬರೂ ಸೇರಿ ಇಂತಹ ಡ್ರಾಮಾ ಮಾಡಿದ್ದು ಸದ್ಯ ರಘು ಹಾಗೂ ವಿವಾಹಿತ ಮಹಿಳೆ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ.

- Advertisement -

Latest News

error: Content is protected !!