Saturday, June 6, 2026
Homeಕರಾವಳಿಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಗಳ ವರ್ಗಾವಣೆ, ಸವಿತ್ರತೇಜಗೆ ಸಿಇಎನ್, ಕದ್ರಿ ಠಾಣೆಗೆ ಅನಂತ...

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಗಳ ವರ್ಗಾವಣೆ, ಸವಿತ್ರತೇಜಗೆ ಸಿಇಎನ್, ಕದ್ರಿ ಠಾಣೆಗೆ ಅನಂತ ಪದ್ಮನಾಭ, ಮಹಿಳಾ ಠಾಣೆಗೆ ಮಧುಸೂದನ ರಾವ್

- Advertisement -
- Advertisement -

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಗಳ ವರ್ಗಾವರ್ಗಿ ನಡೆದಿದೆ. ಮಂಗಳೂರಿನಲ್ಲಿ ಕದ್ರಿ ಠಾಣೆಯಲ್ಲಿ ಇದ್ದ ಸವಿತ್ರತೇಜರನ್ನು ಆರ್ಥಿಕ ಮತ್ತು ಸೈಬರ್ ಅಪರಾಧಗಳ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದೆ.

ಕರಾವಳಿ ಕಾವಲು ಪೊಲೀಸ್ ಠಾಣೆಗೆ ಮೂಡುಬಿದ್ರೆ ಠಾಣೆಯ ಬಿ.ಎಸ್. ದಿನೇಶ್ ಕುಮಾರ್ ಅವರನ್ನು ವರ್ಗ ಮಾಡಲಾಗಿದೆ. ಕರಾವಳಿ ಕಾವಲು ಠಾಣೆಯಲ್ಲಿದ್ದ ಅನಂತ ಪದ್ಮನಾಭ ಅವರನ್ನು ಕದ್ರಿ ಠಾಣೆಗೆ ನೇಮಕ ಮಾಡಲಾಗಿದೆ.

ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಗೆ, ಕೊಣಾಜೆ ಠಾಣೆಯಲ್ಲಿದ್ದ ಮಧುಸೂದನ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ರೇವತಿ ಅವರನ್ನು ಠಾಣೆಯಲ್ಲಿ ಗುಂಪುಗಾರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಮೂಡುಬಿದ್ರೆ ಠಾಣೆಗೆ ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ‌

- Advertisement -

Latest News

error: Content is protected !!