Thursday, June 25, 2026
Homeತಾಜಾ ಸುದ್ದಿಕಾರ್ಕಳ: ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕಾರ್ಕಳ: ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಿ ವ್ಯಕ್ತಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಾರ್ಕಳ: ದಂಪತಿಗಳ ನಡುವೆ ಹಣಕಾಸಿಗೆ ಸಂಬಂಧಿತ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಪತಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಬೆಳ್ಮಣ್ ಪವಿತ್ರ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಲೋರೆನ್ಸ್ ರೋಶನ್ ಲೋಬೋ(35) ಎಂದು ಗುರುತಿಸಲಾಗಿದೆ.

ಲೋರೆನ್ಸ್ ರೋಶನ್ ಲೋಬೋ ಅವರು ಎರಡನೇ ಪತ್ನಿ ರಾಣಿ ಸುನಿಲ್ ದಾಸ್ ಹಾಗೂ 7 ತಿಂಗಳ ಮಗುವಿನೊಂದಿಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಪವಿತ್ರನಗರ ಎಂಬಲ್ಲಿ ವಾಸವಿದ್ದು, ದಂಪತಿಯ ನಡುವೆ ಹಣದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇನ್ನು ಪತ್ನಿ ರಾಣಿ ಸುನಿಲ್ ದಾಸ್ ಅವರು ಲೋರೇನ್ಸ್ ರೋಶನ್ ಲೋಬೋರವರಿಗೆ ಹಣದ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರೆಂಬ ಆರೋಪವು ಕೇಳಿಬಂದಿದ್ದು, ಅದೇ ಕಾರಣದಿಂದ ಮನನೊಂದ ಲೋರೇನ್ಸ್ ರೋಶನ್ ಲೋಬೋ ಮನೆಯ ಮುಂಭಾಗದ ಖಾಸಗಿ ಜಾಗದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಲೋರೆನ್ಸ್ ರೋಶನ್ ಲೋಬೋ ಸಹೋದರಿ ರೇಶ್ಮಾ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!