Monday, April 29, 2024
Homeತಾಜಾ ಸುದ್ದಿಎಲೆಕ್ಟ್ರಿಕಲ್ ಸ್ಕೂಟರ್ ಗೆ Pollution Certificate ಕೇಳಿ 250 ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಎಲೆಕ್ಟ್ರಿಕಲ್ ಸ್ಕೂಟರ್ ಗೆ Pollution Certificate ಕೇಳಿ 250 ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸರು

spot_img
- Advertisement -
- Advertisement -

ಕೇರಳ : ಎಲೆಕ್ಟ್ರಿಕ್ ಸ್ಕೂಟರ್ ಗೆ  Pollution Certificate ಕೇಳಿ ನೀಡಿದ್ದಕ್ಕೆ ಟ್ರಾಫಿಕ್ ಪೊಲೀಸರು ದಂಡ ಹಾಕಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ಯುವಕನೊಬ್ಬ ‘ಏಥರ್’ ಕಂಪನಿಯ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ₹250 ದಂಡ ವಿಧಿಸಿ ರಶೀದಿ ಕೊಟ್ಟಾಗ ಯುವಕ ಹೌಹಾರಿದ್ದಾನೆ. ಪರಿಶೀಲನೆ ವೇಳೆ ಪೊಲ್ಯುಷನ್ ಪ್ರಮಾಣಪತ್ರ ನೀಡಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಯುವಕನಿಗೂ ಕೂಡ ಮನೆಗೆ ಬಂದು ರಶೀದಿ ನೋಡಿದಾಗ ಪೊಲೀಸರ ಪ್ರಮಾದ ಗೊತ್ತಾಗಿದೆ. ಯುವಕ ಇದೇ ರಶೀದಿಯನ್ನು ಟ್ವಿಟರ್‌ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ, ‘ಸ್ವಾಮಿ, ಎಲೆಕ್ಟ್ರಿಕ್ ವಾಹನಗಳಿಗೆ ಪೊಲ್ಯುಷನ್ ಸರ್ಟಿಫಿಕೇಟ್ ಕಡ್ಡಾಯ ಮಾಡಿರುವಿರಾ ಹೇಗೆ?’ ಎಂದು ಪ್ರಶ್ನಿಸಿದ್ದಾನೆ. ಇನ್ನು ಕೇರಳ ಟ್ರಾಫಿಕ್ ಪೊಲೀಸರ ಈ ಯಡವಟ್ಟನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!