ಬೆಂಗಳೂರು: ಯುದ್ಧದ ಸನ್ನಿವೇಶದಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಅನಿಶ್ಚಿತತೆ ಉಂಟಾಗಿರುವ ಕಾರಣ ಪ್ರಯಾಣದ ಅಡಚಣೆ ಎದುರಿಸುತ್ತಿರುವ ಮತ್ತು ಪ್ರಸ್ತುತ ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರ ನೆರವಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಯಾವುದೇ ನೆರವಿಗಾಗಿ ಅಥವಾ ವೀಸಾ ಸಂಬಂಧಿತ ಸಮಸ್ಯೆಗಳಿಗಾಗಿ ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಬಹುದಾಗಿದ್ದು, ಸಂಕಷ್ಟದಲ್ಲಿರುವ ವಿದೇಶಿ ಪ್ರವಾಸಿಗರಿಗೆ ವೀಸಾಗಳ ನಿರ್ವಹಣೆ ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಿದ್ಧವಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ ನೀಡಲಾಗಿದ್ದು, ದೂರವಾಣಿ ಸಂಖ್ಯೆ89706 50021 ಅನ್ನು ಸಂಪರ್ಕಿಸಬಹುದಾಗಿದೆ. ಬೆಳಿಗ್ಗೆ 5:30 ರಿಂದ ರಾತ್ರಿ 10 ಗಂಟೆಯವರೆಗೆ ದೂರವಾಣಿ ಸಂಖ್ಯೆ ಕಾರ್ಯನಿರ್ವಹಿಸಲಿದೆ.
ಅಲ್ಲದೇ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಎಚ್.ಪಿ. ಜನಾರ್ದನ +91 96119 21927 ಅವರನ್ನೂ ಸಂಪರ್ಕಿಸಬಹುದಾಗಿದೆ


