- Advertisement -
![]()
- Advertisement -
ಮಂಗಳೂರು: ನಗರದ ಕ್ಲಾಕ್‌ವರ್ ಬಳಿಯ ಮಿನಿ ವಿಧಾನಸೌಧದ ಮುಂದೆ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಸಮಿತಿಯ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ರಸ್ತೆ ಬದಿಯಲ್ಲೇ ಕಟ್ಟಿಗೆ ಒಲೆಯ ಮೂಲಕ ಚಹಾ ತಯಾರಿಸಿದ ಪ್ರತಿಭಟನಾಕಾರರು, ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಒಲೆಯ ಅಕ್ಕಪಕ್ಕ ಇರಿಸಿದ್ದರು. ಅಷ್ಟೇ ಅಲ್ಲದೆ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಇನ್ನು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ) ಅಧ್ಯಕ್ಷೆ ಅಪ್ಪಿ ಅವರು ಸಿಲಿಂಡರ್‌ನ್ನು ತಲೆಮೇಲೆ ಹೊತ್ತುಕೊಂಡು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಶಶಿಕಲಾ ಪದ್ಮನಾಭ, ವೀಣಾ, ಸ್ವರೂಪ ಶೆಟ್ಟಿ, ಗೀತಾ ಅತ್ತಾವರ, ನಮಿತಾ ಡಿ. ರಾವ್, ಚಂದ್ರಕಲಾ ಜೋಗಿ, ಶಾಂತಳಾ ಗಟ್ಟಿ, ರೂಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
- Advertisement -


