Wednesday, June 3, 2026
Homeತಾಜಾ ಸುದ್ದಿಪ್ರವಾಸಿಗರೇ ಗಮನಿಸಿ...; ನಾಳೆ ಮೈಸೂರು ಅರಮನೆಗಿಲ್ಲ ಪ್ರವೇಶ

ಪ್ರವಾಸಿಗರೇ ಗಮನಿಸಿ…; ನಾಳೆ ಮೈಸೂರು ಅರಮನೆಗಿಲ್ಲ ಪ್ರವೇಶ

- Advertisement -
- Advertisement -

ಮೈಸೂರು : ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಸಾಂಸ್ಕೃತಿಕ ನಗರಿ ಸಂಭ್ರಮದಲ್ಲಿ ಮಿಂದೇಳಲು ಸರ್ವ ರೀತಿಯಲ್ಲೂ ಸಿದ್ಧವಾಗಿದೆ. ಇನ್ನು ಎರಡು ವರ್ಷಗಳ ಬಳಿಕ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿರುವುದರಿಂದ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.

ನಾಳೆ ಅಂದರೆ ಸೆಪ್ಟೆಂಬರ್ 20ರಂದು ಅರಮನೆಯಲ್ಲಿ ಸಿಂಹಾಸನ ಜೋಡಣೆ ಕೆಲಸ ನಡೆಯಲಿದೆ. ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್​ನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತರಲಾಗುತ್ತದೆ. ಇದಕ್ಕೂ ಮುನ್ನ ಹೋಮ ಶಾಂತಿ ಬಳಿಕವೇ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ. ಈ ಹಿನ್ನೆಲೆ ಅರಮನೆ ಪ್ರವೇಶಕ್ಕೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ನಾಳೆ ಮೈಸೂರು ಅರಮನೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಪ್ಲ್ಯಾನ್ ನಲ್ಲಿರುವ ಪ್ರವಾಸಿಗರು ತಮ್ಮ ಪ್ಲ್ಯಾನ್ ನನ್ನು ಬದಲಾಯಿಸೋದೇ ಬೆಸ್ಟ್.

- Advertisement -

Latest News

error: Content is protected !!