Friday, May 3, 2024
Homeತಾಜಾ ಸುದ್ದಿಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 14 ರಲ್ಲಿ ಒಂದು ಕೋಟಿ ಗೆದ್ದ ಮಹಿಳೆ

ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 14 ರಲ್ಲಿ ಒಂದು ಕೋಟಿ ಗೆದ್ದ ಮಹಿಳೆ

spot_img
- Advertisement -
- Advertisement -

ಮುಂಬೈ; ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 14 ರಲ್ಲಿ ಮಹಾರಾಷ್ಟ್ರ ಕೊಲ್ಹಾಪುರದ ಮಹಿಳೆ ಕವಿತಾ ಒಂದು ಕೋಟಿ ರೂ. ಗೆದ್ದಿದ್ದಾರೆ. ಈ ಮೂಲಕ ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 14 ರಲ್ಲಿ ಕೋಟಿ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಾರ್ಯಕ್ರಮದಲ್ಲಿ ಕವಿತಾ ಅವರಿಗೆ 7.5 ಕೋಟಿ ರೂ. ಗೆಲ್ಲುವುದುಕ್ಕೂ ಪ್ರಶ್ನೆ ಕೇಳಲಾಗಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಸೋನಿ ಟಿವಿ ಹಂಚಿಕೊಂಡಿದೆ.

ವಿಶೇಷವೆಂದರೆ ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 14ರಲ್ಲಿ ಕೋಟಿ ಗೆದ್ದ ಮೊದಲ ಮಹಿಳೆಯಾಗಿರುವ ಕವಿತಾ ಓದಿರುವುದು ಬರೀ ದ್ವಿತೀಯ ಪಿ.ಯು.ವರೆಗೆ ಮಾತ್ರ. ಈ ಕಾರ್ಯಕ್ರಮ ಇಂದು ಹಾಗೂ ಮಂಗಳವಾರ ಸೋನಿ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

- Advertisement -
spot_img

Latest News

error: Content is protected !!