Thursday, June 4, 2026
Homeತಾಜಾ ಸುದ್ದಿರಕ್ತದಾನ ಮಾಡಿ ಮತ್ತೊಂದು ನಾಯಿ ಜೀವ ಉಳಿಸಿ ಶ್ವಾನ

ರಕ್ತದಾನ ಮಾಡಿ ಮತ್ತೊಂದು ನಾಯಿ ಜೀವ ಉಳಿಸಿ ಶ್ವಾನ

- Advertisement -
- Advertisement -

ಧಾರವಾಡ: ನಾಯಿಯೊಂದು ರಕ್ತದಾನ ಮಾಡಿ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತೊಂದು ಶ್ವಾನದ ಜೀವ ಉಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. 

ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ. ಅಲ್ಲದೇ ಇನ್ನೊಂದು ಶ್ವಾನಕ್ಕೆ ಜೀವದಾನ ಮಾಡಿದೆ.

- Advertisement -

Latest News

error: Content is protected !!