Wednesday, June 3, 2026
Homeತಾಜಾ ಸುದ್ದಿನಾಳೆ ಪ್ರಧಾನಿ ನರೇಂದ್ರ ಮೋದಿ ವಯನಾಡಿಗೆ ಭೇಟಿ

ನಾಳೆ ಪ್ರಧಾನಿ ನರೇಂದ್ರ ಮೋದಿ ವಯನಾಡಿಗೆ ಭೇಟಿ

- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತದಿಂದ ಸ್ಮಶಾನವಾದ ವಯನಾಡಿಗೆ ಭೇಟಿ ನೀಡಲಿದ್ದಾರೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸೇನೆ ನಿರ್ಮಿಸಿದ ಪರಿಹಾರ ಶಿಬಿರ, ಆಸ್ಪತ್ರೆ ಮತ್ತು ಬೈಲಿ ಸೇತುವೆಯ ಬಳಿ ಮೋದಿ ಇಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಅವರು ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಐಎಎಫ್ ಹೆಲಿಕಾಪ್ಟರ್ ಮೂಲಕ ವಯನಾಡ್ ಗೆ ತೆರಳಲಿದ್ದಾರೆ.


ಮೋದಿ ಅವರು ಬದುಕುಳಿದವರು ಮತ್ತು ಗಾಯಗೊಂಡವರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಅವರು ಅದೇ ದಿನ ಸಂಜೆ 4 ಗಂಟೆಗೆ ನವದೆಹಲಿಗೆ ತೆರಳಲಿದ್ದಾರೆ.ವಯನಾಡ್ ವಿಪತ್ತು ಪ್ರತಿಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವ ಕೇರಳ ಕ್ಯಾಬಿನೆಟ್ ಉಪಸಮಿತಿ ಮತ್ತು ಜಿಲ್ಲಾಡಳಿತವು ಪ್ರಧಾನಿ ಅವರನ್ನು ಸ್ವಾಗತಿಸಲಿದೆ.

ಗುರುವಾರ (ಆಗಸ್ಟ್ 8) ಅಡ್ವಾನ್ಸ್ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ) ತಂಡವು ವಯನಾಡ್ಗೆ ಭೇಟಿ ನೀಡಿ ಮೋದಿಯವರ ಹೆಲಿಕಾಪ್ಟರ್ಗೆ ಸುರಕ್ಷಿತ ಲ್ಯಾಂಡಿಂಗ್ ವಲಯವನ್ನು ಗುರುತಿಸಿದೆ. ಪ್ರಧಾನಿಯ ಭೇಟಿಯನ್ನು ಸುಗಮಗೊಳಿಸಲು ಕೇರಳ ಪೊಲೀಸರು ಎಸ್ಪಿಜಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.

- Advertisement -

Latest News

error: Content is protected !!