ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೊದಲ್ಲಿ ನೀರಜ್ ಛೋಪ್ರಾಗೆ ಬೆಳ್ಳಿ ಪದಕ ಲಭಿಸಿದೆ. ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ ಅವರ ಮೇಲೆ ಈ ಬಾರಿಯೂ ಚಿನ್ನದ ಪದಕ ತರ್ತಾರೆ ಅನ್ನೋ ನಿರೀಕ್ಷೆಯಿತ್ತು. ಭರ್ಜರಿ ಪ್ರದರ್ಶನ ನೀಡಿದ ನೀರಜ್, ಪಾಕಿಸ್ತಾನದ ಅರ್ಶದ್ ನದೀಮ್ ಗೆ ಜಿದ್ದಾಜಿದ್ದಿನ ಫೈಟ್ ನೀಡಿದರು. ಆದರೆ ಕೊನೆಗೆ ಪಾಕಿಸ್ತಾನ ದ ಅರ್ಷದ್ ನದೀಮ್ ಎಂದು ಮಂಡಿಯೂರಬೇಕಾಯಿತು. ಇನ್ನು ಅರ್ಷದ್ ನದೀಮ್ 32 ವರ್ಷದ ಬಳಿಕ ಪದಕ ಗೆದ್ದ ಪಾಕಿಸ್ತಾನದ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನ ಫಾಲ್ ಆಗಿತ್ತು. ಪಾಕಿಸ್ತಾನದ ಅರ್ಶದ್ ನದೀಮ್ ತಮ್ಮ ಎರಡನೇ ಪ್ರಯತ್ನದಲ್ಲಿ 92.97 ಮೀಟರ್ ದೂರ ಜಾವೆಲಿನ್ ಎಸೆದು ತಮ್ಮದೇ ದಾಖಲೆಯನ್ನು ಅಳಸಿ ಹಾಕಿದ್ದಾರೆ. ನೀರಜ್ ಚೋಪ್ರಾ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದು ಮಿಂಚಿದ್ದಾರೆ. ಫೈನಲ್‌ಗೆ ಅರ್ಹತೆ ಪಡೆದ 12 ಅಥ್ಲೀಟ್‌ಗಳು ತಲಾ ಮೂರು ಬಾರಿ ಪ್ರಯತ್ನ ನಡೆಸಿದರು. ಈ ವೇಳೆ ಉತ್ತಮ ದೂರ ಎಸೆದ ಎಂಟು ಅಥ್ಲೀಟ್‌ಗಳಿಗೆ ಅಂತಿಮ ಅವಕಾಶ ದೊರಕಿತು. ಈ ಎಂಟು ಅಥ್ಲೀಟ್‌ಗಳಿಗೆ ಇನ್ನು ಮೂರು ಚಾನ್ಸ್ ನೀಡಲಾಯಿತು. ತಮ್ಮ ಫೈನಲ್ ಪ್ರಯತ್ನದಲ್ಲಿ ನೀರಜ್ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಕೊಂಚ ಎಡವಿದರು. ಅಲ್ಲದೆ 90 ಮೀಟರ್ ಮಾರ್ಕ್ ದಾಟುವಲ್ಲಿ ವಿಫಲರಾದರು. ತಮ್ಮ ಎರಡನೇ ಪ್ರಯತ್ನದಲ್ಲಿ ಅರ್ಷದ್ ನದೀಮ್ 92.97 ಮೀಟರ್ ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಖಾತ್ರಿ ಮಾಡಿಕೊಂಡರೆ, ನೀರಜ್ ಬೆಳ್ಳಿಯ ನಗೆ ಬೀರಿದ್ದಾರೆ.
ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡ ಹಾಕಿ ತಂಡ
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ನಲ್ಲಿ ಭಾರತದ ಹಾಕಿ ತಂಡ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್ ತಲುಪಲು ವಿಫಲಗೊಂಡಿತ್ತ., ಗುರುವಾರ (ಆಗಸ್ಟ್ 8) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದ 4ನೇ ಕಂಚಿನ ಪದಕ ಆಗಿದೆ. ಇದರ ಹೊರತಾಗಿ 8 ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳನ್ನು ಭಾರತ ಗೆದ್ದಿದೆ. ಅಂದಹಾಗೆ 1980ರ ಬಳಿಕ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಚಿನ್ನ ಗೆದ್ದಿಲ್ಲ.



