- Advertisement -
![]()
- Advertisement -
ಬೆಂಗಳೂರು : ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಎಪಿಎಂಸಿ ಹಾಗೂ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ 40 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ.
ಹಾಗಾದ್ರೆ ನಾಳೆ ಏನಿರುತ್ತೆ ಅನ್ನೋದನ್ನು ನೋಡೋಣ…
- ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಲಭ್ಯ
- ಹೋಟೆಲ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು ತೆರೆದಿರುತ್ತವೆ
- ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಎಂದಿನಂತೆ ಸಂಚಾರ
ಏನೇನಿರಲ್ಲ?
- ಓಲಾ-ಉಬರ್, ಆಟೋ-ಟ್ಯಾಕ್ಸಿ ಸೇವೆ ಲಭ್ಯವಿಲ್ಲ
- ಖಾಸಗಿ ಬಸ್, ಲಾರಿ ಸೇವೆಗಳು ಸ್ಥಗಿತ
- ಬೀದಿ ಬದಿ ವ್ಯಾಪಾರ ಬಂದ್
ಇನ್ನೂ ಕೆಲವು ಸಂಘಟನೆಗಳು ಈ ಬಂದ್ ಗೆ ಬೆಂಬಲ ನೀಡಿದರೆ ಇನ್ನೂ ಕೆಲವು ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
- Advertisement -


