Saturday, June 6, 2026
Homeಕರಾವಳಿಬಂಟ್ವಾಳ: ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು !

ಬಂಟ್ವಾಳ: ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು !

- Advertisement -
- Advertisement -

ಬಂಟ್ವಾಳ: ತಾಳೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರು ಹೆಂಡ ತೆಗಿಯುವ ಸಲುವಾಗಿ ಮರ ಹತ್ತಿದ್ದರು. ತಾಲೂಕಿನ ನರಿಕೊಂಬು ಗ್ರಾಮದ ಕೆದ್ದೆಲು ಎಂಬಲ್ಲಿ ಈ ಘಟನೆ ನಡೆದಿದೆ.

ಮೃತ ಪ್ರಕಾಶ್ ಜೀವನೋಪಾಯಕ್ಕಾಗಿ ತಾಳೆಮರದ ಕಡ್ಡಿಯನ್ನು ಕಡಿಯುತ್ತಿದ್ದರು. ಹಲವು ಮರಗಳಿಂದ ಹೆಂಡ ಸಂಗ್ರಹಿಸಿ ಎತ್ತರದ ಹಳೆಯ ಮರವನ್ನು ಏರಿದ್ದರು. ಆದರೆ, ಸಮತೋಲನ ತಪ್ಪಿ ನೆಲದ ಮೇಲೆ ಬಿದ್ದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಪ್ರಕಾಶ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕಾಶ್ ಕಳೆದ 20 ವರ್ಷಗಳಿಂದ ಹೆಂಡ ತೆಗೆಯುವ ಕೆಲಸ ಮಾಡುತ್ತಿದ್ದರು.

- Advertisement -

Latest News

error: Content is protected !!