Saturday, June 6, 2026
Homeಕರಾವಳಿಉಡುಪಿಕಾರ್ಕಳ: ವಾಟ್ಸಾಪ್‌ ಮೂಲಕ ತನ್ನ ಗೆಳೆಯನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸ್ಸೇಜ್‌ ಮಾಡಿ ವ್ಯಕ್ತಿ ನೇಣಿಗೆ ಶರಣು...

ಕಾರ್ಕಳ: ವಾಟ್ಸಾಪ್‌ ಮೂಲಕ ತನ್ನ ಗೆಳೆಯನಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸ್ಸೇಜ್‌ ಮಾಡಿ ವ್ಯಕ್ತಿ ನೇಣಿಗೆ ಶರಣು !

- Advertisement -
- Advertisement -

ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಸಮೀಪದ ದೊಡ್ಡಪಲ್ಕೆ ಕ್ರಾಸ್ ಎಂಬಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ.

ಮೃತ ಯುವಕನನ್ನು ಬಾಗಲಕೋಟೆ ಮೂಲದ ನಿವಾಸಿ ಮೃತ್ಯುಂಜಯ (28) ಎಂದು ಗುರುತಿಸಲಾಗಿದೆ. ಮೃತ ಮೃತ್ಯುಂಜಯನು ಅಜೆಕಾರಿನ ಸುನೀಲ್ ರವರ ಕೃಷಿ ಯಂತ್ರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಅವರಿಗೆ ಬೈಕ್ ನ ವ್ಯಾಮೋಹ ಹೆಚ್ಚಾಗಿದ್ದ ಕಾರಣ ಸುಮಾರು 8 ತಿಂಗಳ ಹಿಂದೆ ಬೈಕ್ X Pulse ಬೈಕ್ ನ್ನು ಲೋನ್ ಮೂಲಕ ತೆಗದುಕೊಂಡಿದ್ದು, 1 ತಿಂಗಳ ಹಿಂದೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟ ಕಾರಣ ಬೈಕ್ ಲೋನ್ ಕಟ್ಟಲು ಕಷ್ಟವಾಗಿ 10 ದಿನದ ಹಿಂದೆ ಬೈಕ್ ನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ.

ಇಂದು ತನ್ನ ವಾಟ್ಸಾಪ್‌ ಮೂಲಕ ತನ್ನ ಗೆಳೆಯನಿಗೆ ಮೆಸ್ಸೇಜ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ, ಗೆಳೆಯ ಮೆಸ್ಸೆಜ್‌ ನೋಡಿ ಮೃತ್ಯುಂಜಯನಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದೇ ಇದ್ದಾಗ ಸ್ಥಳಕ್ಕೆ ಹೋಗಿ ನೋಡಿದಾಗ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!