Friday, June 5, 2026
Homeತಾಜಾ ಸುದ್ದಿನ್ಯಾಯಬೇಕೆಂದು ಮೊಬೈಲ್​ ಟವರ್​ ಏರಿದ ದಂಪತಿ!.. ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ

ನ್ಯಾಯಬೇಕೆಂದು ಮೊಬೈಲ್​ ಟವರ್​ ಏರಿದ ದಂಪತಿ!.. ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ

- Advertisement -
- Advertisement -

ಹಾಸನ: ಇಲ್ಲಿನ ಬೇಲೂರು ತಾಲೂಕಿನ ದೇವರಾಜಪುರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪೆಟ್ರೋಲ್​ ಹಿಡಿದು ದಂಪತಿ ಮೊಬೈಲ್​ ಟವರ್​ ಏರಿರುವ ಘಟನೆ ನಡೆದಿದೆ. ನ್ಯಾಯ ಸಿಗೋವರೆಗೂ ಟವರ್​ನಿಂದ ಕೆಳಗೆ ಇಳಿಯುವುದಿಲ್ಲವೆಂದು ಹಠಹಿಡಿದಿದ್ದ ದಂಪತಿ ತಮ್ಮಗ್ರಾಮದಲ್ಲಿ ಒಂದೂವರೆ ಎಕರೆ ಸರ್ಕಾರಿ ಜಾಗವನ್ನು ಅಧಿಕಾರಿಗಳು ಉಳ್ಳವರ ಪಾಲಿಗೆ ಬರೆದುಕೊಟ್ಟಿದ್ದಾರೆ ಈಗ ನೂರಾರು ಕುಟುಂಬಗಳಿಗೆ ವಾಸ ಮಾಡಲು ಜಾಗವಿಲ್ಲ.ನಮ್ಮವರಿಗೆ ನ್ಯಾಯ ಬೇಕು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಒತ್ತಾಯಿಸಿದ್ದಾರೆ.

ಇದೇವೇಳೆ ನ್ಯಾಯ ಸಿಗಲಿಲ್ಲವೆಂದರೆ ಪೆಟ್ರೋಲ್ ಹಾಕಿಕೊಂಡು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳಗ್ಗೆ ದಂಪತಿಗಳಾದ ಮೋಹನ್ ರಾಜ್ ಹಾಗೂ ಚಂದಾ ಟವರ್​ ಏರಿದ್ದು ಮನವೊಲಿಸುವ ಕಾರ್ಯ ನಡೆಯುತ್ತಿದೆ.ಸ್ಥಳದಲ್ಲಿ ಆಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

- Advertisement -

Latest News

error: Content is protected !!