Thursday, April 25, 2024
Homeಉದ್ಯಮಟಿಕ್ ಟಾಕ್ ಪ್ರೀಯರಿಗೆ ಕಹಿ ಸುದ್ದಿ: ಟಿಕ್ ಟಾಕ್ ಸಹಿತ 59 ಚೀನಾ ಆಪ್ ಗಳಿಗೆ...

ಟಿಕ್ ಟಾಕ್ ಪ್ರೀಯರಿಗೆ ಕಹಿ ಸುದ್ದಿ: ಟಿಕ್ ಟಾಕ್ ಸಹಿತ 59 ಚೀನಾ ಆಪ್ ಗಳಿಗೆ ಶಾಶ್ವತ ನಿಷೇಧ

spot_img
- Advertisement -
- Advertisement -

ನವದೆಹಲಿ: ಸಿಕ್ಕಿಂನ ನಾಕು ಲಾದಲ್ಲಿ ಚೀನಾದ ಸೈನಿಕರು ಭಾರತದ ಸೈನಿಕರ ಜತೆಗೆ ಘರ್ಷಣೆಗೆ ಇಳಿದಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರವು ಟಿಕ್ ಟಾಕ್ ಸಹಿತ 59 ಚೀನಾದ ಆಪ್ ಗಳಿಗೆ ಸಂಪೂರ್ಣ ನಿಷೇಧ ಹೇರಲು ನಿರ್ಧರಿಸಿದೆ.

ಟಿಕ್ ಟಾಕ್ ಮತ್ತು ಇತರ 58 ಆಪ್ ಗಳಿಗೆ ಶಾಶ್ವತವಾಗಿ ನಿಷೇಧ ಹೇರಲು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯವು ನಿರ್ಧಾರ ಮಾಡಿದೆ ಎಂದು ವರದಿಗಳು ಹೇಳಿವೆ.

ಕಳೆದ ವರ್ಷ ಜೂನ್ ನಲ್ಲಿ ಕೇಂದ್ರ ಸರ್ಕಾರವು ಚೀನಾದ 170ಕ್ಕೂ ಹೆಚ್ಚು ಮೊಬೈಲ್ ಆಯಪ್ ಆಪ್ ಗಳಿಗೆ ನಿಷೇಧ ಹೇರಿತ್ತು. ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಈ ಆಪ್ ಗಳಿಗೆ ನಿಷೇಧ ಹೇರಲಾಗಿತ್ತು.

ಆಯಪ್ ನಿಂದ ಸಂಗ್ರಹಿಸಿದ ಮಾಹಿತಿಗಳ ವಿವರ ನೀಡುವುದು ಹಾಗೂ ಇದನ್ನು ಹೇಗೆ ಬಳಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಉತ್ತರ ನೀಡುವಂತೆ ಅವಕಾಶ ನೀಡಿತ್ತು. ಆದರೆ ಇವುಗಳಲ್ಲಿ ಟಿಕ್ ಟಾಕ್ ಸಹಿತ 57 ಆಯಪ್ ಗಳಿಂದ ಬಂದ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ಶಾಶ್ವತವಾಗಿ ನಿಷೇಧಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!