Saturday, May 4, 2024
Homeಕ್ರೀಡೆಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ಎದುರು ಕರ್ನಾಟಕ ತಂಡಕ್ಕೆ ಹೀನಾಯ ಸೋಲು

ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ಎದುರು ಕರ್ನಾಟಕ ತಂಡಕ್ಕೆ ಹೀನಾಯ ಸೋಲು

spot_img
- Advertisement -
- Advertisement -

ಅಹ್ಮದಾಬಾದ್: ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್‌ ವಿರುದ್ಧ 9 ವಿಕೆಟ್ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ ಕರ್ನಾಟಕದ ಸ್ಪರ್ಧೆ ಅಂತ್ಯಗೊಂಡಿದೆ.

ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಕರ್ನಾಟಕ ತಂಡ ನಿರಾಸೆ ಅನುಭವಿಸಿತು. ಬೆಂಗಳೂರು ಹೊರವಲಯ ಆಲೂರಿನಲ್ಲಿ ನಡೆದ ಲೀಗ್ ಹಂತದಲ್ಲೂ ಪಂಜಾಬ್ ತಂಡಕ್ಕೆ ಶರಣಾಗಿದ್ದ ಕರ್ನಾಟಕ ತಂಡ ಇದೀಗ ಎಂಟರಘಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ಸಿಕ್ಕ ಅವಕಾಶವನ್ನು ಕೈಚೆಲ್ಲಿತು.

ಸರ್ದಾರ್ ಪಟೇಲ್ ಮೊಟೆರಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, 17.2 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಪ್ರಭ್‌ಸಿಮ್ರಾನ್ ಸಿಂಗ್ (49ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಮಂದೀಪ್ ಸಿಂಗ್ (35ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಲವಾಗಿ 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಕರ್ನಾಟಕ: 17.2 ಓವರ್‌ಗಳಲ್ಲಿ 87
(ದೇವದತ್ ಪಡಿಕಲ್ 11, ಕರುಣ್ ನಾಯರ್ 12, ಅನಿರುದ್ಧ್ ಜೋಶಿ 27, ಶ್ರೇಯಸ್ ಗೋಪಾಲ್ 13, ಸಂದೀಪ್ ಶರ್ಮ 17ಕ್ಕೆ 2, ಅರ್ಷ್‌ದೀಪ್ ಸಿಂಗ್ 16ಕ್ಕೆ 2, ಸಿದ್ದಾರ್ಥ್ ಕೌಲ್ 15ಕ್ಕೆ 3, ರಮಣದೀಪ್ ಸಿಂಗ್ 22ಕ್ಕೆ 2, ಮಯಾಂಕ್ ಮಾರ್ಕಂಡೆ 12ಕ್ಕೆ 1),

ಪಂಜಾಬ್: 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 89
(ಪ್ರಭ್‌ಸಿಮ್ರಾನ್ ಸಿಂಗ್ 49, ಮಂದೀಪ್ ಸಿಂಗ್ 35, ಮಿಥುನ್ 11ಕ್ಕೆ 1).

- Advertisement -
spot_img

Latest News

error: Content is protected !!