Saturday, June 6, 2026
Homeಕರಾವಳಿಉಡುಪಿಉಡುಪಿಯಲ್ಲಿ ಮಕ್ಕಳ ಅಪಹರಣ ಯತ್ನ ಆರೋಪ : ಇಬ್ಬರನ್ನು ಬಂಧಿಸಿದ ಪೊಲೀಸರು

ಉಡುಪಿಯಲ್ಲಿ ಮಕ್ಕಳ ಅಪಹರಣ ಯತ್ನ ಆರೋಪ : ಇಬ್ಬರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಉಡುಪಿ :  ಮಕ್ಕಳ ಅಪಹರಣ ನಡೆಸಿದೆ ಎಂದು ಆರೋಪಿಸಿ ಸ್ಥಳೀಯರು ಬೆಂಗಳೂರಿನಿಂದ ಬಂದಿದ್ದಾರೆ ಎನ್ನಲಾದ ಇಬ್ಬರನ್ನು ಪೋಲೀಸರಿಗೆ ಒಪ್ಪಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಟ್ಟು ಸಮೀಪದ ಜಪ್ತಿ ಎಂಬಲ್ಲಿ ನಡೆದಿದೆ.

ಬೈಕಿನಲ್ಲಿ ಬಂದ ಮೂವರು ಗುಡ್ಡಟ್ಟು ಸಮೀಪ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸಿದ್ದು ಇದನ್ನು ಪ್ರಶ್ನಿಸಲು ಮುಂದಾದ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಸಿ ಅಲ್ಲಿಂದ ಓಡಿದ್ದಾರೆ. ಆದರೆ ಎಚ್ಚೆತ್ತ ಸ್ಥಳೀಯರು ಜಪ್ತಿ ಎಂಬಲ್ಲಿ ಅವರನ್ನು ತಡೆ ಹಿಡಿದು ಇಬ್ಬರನ್ನು ಕೋಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಘಟನೆಯಲ್ಲಿ ಓರ್ವ ಸ್ಥಳೀಯ ವ್ಯಕ್ತಿ ಕೂಡಾ ಭಾಗಿಯಾಗಿದ್ದ ಎನ್ನಲಾಗಿದ್ದು, ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!