
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಉಜಿರೆಯ ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿಯನ್ನು 16-03-2026 ರಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಅವರು ಆರು ತಿಂಗಳ ಕಾಲ(16-03-2026 ರಿಂದ 16-09-2026 ರವರೆಗೆ) ಗಡಿಪಾರು ಆದೇಶ ಮಾಡಿದ ಬಳಿಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಸುಪ್ರೀಂ ಕೋರ್ಟ್ ವರೆಗೂ ಗಡಿಪಾರು ಆದೇಶದ ವಿರುದ್ಧ ಹೋರಾಟ ಮಾಡಿ ಯಾವುದೇ ಫಲ ಸಿಗದ ಕಾರಣದಿಂದ ಕೊನೆಗೂ ತಿಮರೋಡಿ ಶರಣಾಗತಿಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಗಡಿಪಾರು ವಿರುದ್ಧ ಹಾಕಿದ್ದ ಅರ್ಜಿ ವಜಾಗೊಂಡ ಬಳಿಕ ಬೆಳ್ತಂಗಡಿ ಪೊಲೀಸರು ಗಡಿಪಾರು ಮಾಡಲು ತಿಮರೋಡಿಯ ಹುಡುಕಾಟವನ್ನು ಚುರುಕುಗೊಳಿಸಿದ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆ ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ಇಂದು ಅಥವಾ ನಾಳೆ(ಜು.23 ಅಥವಾ ಜು.24) ತಿಮರೋಡಿ ಮಹೇಶ್ ಶೆಟ್ಟಿ ತೆರಳಿ ಶರಣಾಗತಿ ಆಗಿ ಬಳಿಕ ಗಡಿಪಾರು ಅಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊನೆ ಕ್ಷಣದಲ್ಲಿ ಶರಣಾಗತಿಯಾಗುವ ಪೊಲೀಸ್ ಠಾಣೆ ಬದಲಾವಣೆಯಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರು ಜಿಲ್ಲೆಯ ಪೊಲೀಸರಿಗೆ ಶರಣಾಗತಿಯಾದ್ರೆ ಬಳಿಕ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಗಡಿಪಾರು ಪ್ರಕ್ರಿಯೆಯನ್ನು ಜಾರಿ ಮಾಡಿ ನೇರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತಿಮರೋಡಿಯನ್ನು ಕರೆದುಕೊಂಡು ಹೋಗಿ ಮಾನ್ವಿ ಪೊಲೀಸ್ ಠಾಣೆಗೆ ಹಾಜರುಪಡಿಸಿ ಗಡಿಪಾರು ಹಸ್ತಾಂತರ ಪೂರ್ಣಗೊಳಿಸಲಿದ್ದಾರೆ.


