ಬೆಳ್ತಂಗಡಿ: ಸೇವಾಭಾರತಿ(ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ(ರಿ.), ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್, ಉಜಿರೆ ಮತ್ತು ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 38 ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 10 ರಂದು ಸಂಜೀವಿನಿ ಕಟ್ಟಡ ಗ್ರಾಮ ಪಂಚಾಯತ್ ಉಜಿರೆಯಲ್ಲಿ ನಡೆಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಘುರಾಮ ಶೆಟ್ಟಿ ”ಸಾಧನಾ'” ರವರು ಶಿಬಿರಕ್ಕೆ ಚಾಲನೆ ನೀಡಿ, ಟೈಲರಿಂಗ್ ತರಬೇತಿಯು ಕೇವಲ ಕಲೆ ಮಾತ್ರವಲ್ಲ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣದ ಉತ್ತಮ ಅವಕಾಶವಾಗಿದೆ. ಈ ತರಬೇತಿಯ ಮೂಲಕ ಹೊಸ ಕೌಶಲ್ಯಗಳನ್ನು ಕಲಿತು ಸ್ವಾವಲಂಬಿಗಳಾಗುವಂತೆ ಶುಭಹಾರೈಸಿದರು.
ಸೇವಾಭಾರತಿ ಅಧ್ಯಕ್ಷರಾದ ಹಾಗೂ ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರು ಯಶಸ್ಸಿಗೆ ದೊಡ್ಡ ಅವಕಾಶಗಳಿಗಿಂತ ಕಲಿಯುವ ಮನಸ್ಸು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಮುಖ್ಯ. ಆದ್ದರಿಂದ ಈ ತರಬೇತಿಯನ್ನು ಉತ್ತಮ ಅವಕಾಶವಾಗಿ ಸ್ವೀಕರಿಸಿ ಎಂದು ಅಧ್ಯಕ್ಷರ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶ್ರೀ ಪ್ರಕಾಶ್ ಶೆಟ್ಟಿ,ಮಹಿಳೆಯರು ಸ್ವಾವಲಂಬನೆ ಮತ್ತು ಉದ್ಯಮಶೀಲರಾಗಲು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಮುಂದೆಯೂ ಸದಾ ನನ್ನ ಬೆಂಬಲವಿದೆ. ಎಂದುಶುಭ ಹಾರೈಸಿದರು.
ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ(ರಿ.), ಅಧ್ಯಕ್ಷರಾದ ಶ್ರೀಮತಿ ವಿನುತಾ ರಜತ್ ಗೌಡ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ ಗ್ರಾಮ ಪಂಚಯಾತ್ ಮಾಜಿ ಅಧ್ಯಕ್ಷರು ಶ್ರೀಮತಿ ಪುಷ್ಪವತಿ, ಬೆಳ್ತಂಗಡಿ ತಾಲೂಕು ಕೃಷಿಯೇತರ ವ್ಯವಸ್ಥಾಪಕರಾದ ಶ್ರೀ ನಿತೀಶ್ ಉಜಿರೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಉಷಾ ಕಿರಣ್ ಕಾರಂತ್, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಮಮತಾ ಬಿ, ಟೈಲರಿಂಗ್ ತರಬೇತುದಾರರಾದ ಶ್ರೀಮತಿ ಲಲಿತ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 66 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶ್ರೀಮತಿ ಶಾಶ್ವಿತ ಸ್ವಾಗತಿಸಿ, ಶ್ರೀಮತಿ ಸಂಧ್ಯಾ ನಿರೂಪಿಸಿ, ಶ್ರೀಮತಿ ಭಾಗೀರಥಿ ಧನ್ಯವಾದವಿತ್ತರು.


