Tuesday, June 23, 2026
Homeಮನರಂಜನೆಆತ್ಮಹತ್ಯೆಗೆ ಶರಣಾದ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್

ಆತ್ಮಹತ್ಯೆಗೆ ಶರಣಾದ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್

- Advertisement -
- Advertisement -

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯ ನೋವಿನಿಂದ ಇನ್ನೂ ಕೂಡ ಅಭಿಮಾನಿಗಳು ಹೊರ ಬಂದಿಲ್ಲ. ಹೀಗಿರುವಾಗಲೇ ಮತ್ತೊಂದು ಆತ್ಮಹತ್ಯೆಯ ಸುದ್ದಿ ಕೇಳಿ ಬಂದಿದೆ. ಟಿಕ್ ಟಾಕ್ ಗಳ ಮೂಲಕವೇ ಕೋಟ್ಯಂತರ ಮಂದಿಯ ಹೃದಯ ಗೆದ್ದಿದ್ದ 16 ವರ್ಷದ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟಿಕ್‍ಟಾಕ್ ವಿಡಿಯೋಗಳ ಮೂಲಕವೇ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದರು. ಇನ್ನು ಈ ಬಗ್ಗೆ  ಪೋಸ್ಟ್ ಮಾಡಿರುವ ವಿರಲ್ ಬಯಾನಿ, ಬುಧವಾರ ಸಂಜೆಯವರೆಗೂ ಆಕೆ ಚೆನ್ನಾಗಿದ್ದಳು. ಸಿಯಾ ಮ್ಯಾನೇಜರ್ ಅರ್ಜುನ್ ಸರಿನ್ ಜೊತೆ ಹಾಡಿನ ಬಗ್ಗೆ ಮಾತುಕತೆ ಆಗಿತ್ತು. ಆದ್ರೆ ಸಿಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೊತೆಯಲ್ಲಿಯೇ ಇರುತ್ತಿದ್ದ ಮ್ಯಾನೇಜರ್ ಅರ್ಜುನ್ ಗೂ ಈ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ, ಆದರೆ ಎಲ್ಲವೂ ಇದ್ದು ಇತ್ತೀಚೆಗೆ ಕಾರಣವೇ ಅಲ್ಲದ ಕಾರಣಕ್ಕೆ ಯುವ ಜನತೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಿರೋದು ನಿಜಕ್ಕೂ ಬೇಸರದ ಸಂಗತಿ.

- Advertisement -

Latest News

error: Content is protected !!