Wednesday, May 15, 2024
Homeಮಹಾನ್ಯೂಸ್ಪುಣೆ: ಲಾಕ್ ಡೌನ್ ನಿಂದ ಮಾನಸಿಕ ಖಿನ್ನತೆ, ಕರಾವಳಿ ಮೂಲದ ಹೋಟೆಲ್ ಉದ್ಯಮಿ ಪ್ರೇಮನಾಥ್ ಕೃಷ್ಣ...

ಪುಣೆ: ಲಾಕ್ ಡೌನ್ ನಿಂದ ಮಾನಸಿಕ ಖಿನ್ನತೆ, ಕರಾವಳಿ ಮೂಲದ ಹೋಟೆಲ್ ಉದ್ಯಮಿ ಪ್ರೇಮನಾಥ್ ಕೃಷ್ಣ ಶೆಟ್ಟಿ ಆತ್ಮಹತ್ಯೆ

spot_img
- Advertisement -
- Advertisement -

ಪುಣೆ: ಲಾಕ್ ಡೌನ್ ಸಂದರ್ಭದಲ್ಲಿ ಪುಣೆ ನಗರದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಆತಂಕದ ವಿಷಯವಾಗಿದೆ , ಕಳೆದ ಒಂದು ವಾರದಲ್ಲೇ ನಗರದಲ್ಲಿ ಅಲ್ಲಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇದೆ . ಇದೇ ನಿಟ್ಟಿನಲ್ಲಿ ಇಂದು ಬೆಳಗ್ಗೆ ನಗರದ ಸಿಂಹಘಡ್ ರಸ್ತೆಯ ಧಾಯರಿ ಪರಿಸರದ ರಾಜ್ ಹೋಟೆಲಿನಲ್ಲಿ ಹೋಟೆಲ್ ಉದ್ಯಮಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ .

ಮೃತರನ್ನು ಕರಾವಳಿ ಹೋಟೆಲ್ ಮೂಲದ ಉದ್ಯಮಿ ಪ್ರೇಮನಾಥ್ ಕೃಷ್ಣ ಶೆಟ್ಟಿ (43) ಎಂದು ಗುರುತಿಸಲಾಗಿದೆ.

ಮೃತ ಪ್ರೇಮನಾಥ ಶೆಟ್ಟಿ ಕಳೆದ 7 ವರ್ಷಗಳಿಂದ ರಾಜ್ ಹೋಟೆಲ್ ನಲ್ಲಿ ಪಾಲುದಾರರಾಗಿದ್ದರು. ಲಾಕ್ ಡೌನ್ ನಿಂದಾಗಿ ಕಳೆದ 4 ತಿಂಗಳಿನಿಂದ ಹೋಟೆಲ್ ಬಂದ್ ಆಗಿದ್ದು ಡಿಪ್ರೆಶನ್ ನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ . ಇಂದು ಬೆಳಗ್ಗೆ ಗಂಟೆ 9:30 ರ ಸುಮಾರಿಗೆ ಹೋಟೆಲ್ ಕಾರ್ಮಿಕನೊಬ್ಬ ಹೋಟೆಲ್ ತೆರೆದಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ಕಂಡುಬಂದಿದೆ .

ಮೃತದೇಹದ ಬಳಿ ಡೆತ್ ನೋಟೊಂದು ಸಿಕ್ಕಿದ್ದು, “ಲಾಕ್ ಡೌನ್ ನಿಂದಾಗಿ ಹೋಟೆಲ್ ಬಂದ್ ಆಗಿದ್ದು ಪರಿಸ್ಥಿತಿ ಹದಗೆಟ್ಟಿದ್ದು ತೀವ್ರ ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ . ನಾನು ಸ್ವತಃ ಇಚ್ಚೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ” ಎಂದು ಬರೆಯಲಾಗಿದೆ.

- Advertisement -
spot_img

Latest News

error: Content is protected !!