Saturday, June 6, 2026
Homeತಾಜಾ ಸುದ್ದಿಮಹಾರಾಷ್ಟ್ರ: ಕಾಡಿನಲ್ಲಿ ಸಮಯ ಕಳೆಯಲು ತೆರಳಿದ ಪ್ರೇಮಿಗಳು: ಪೊದೆಯಲ್ಲಿ ಏಕಾಂತದಲ್ಲಿದ್ದಾಗ ಯುವಕನ ಮೇಲೆ ಹುಲಿ ದಾಳಿ

ಮಹಾರಾಷ್ಟ್ರ: ಕಾಡಿನಲ್ಲಿ ಸಮಯ ಕಳೆಯಲು ತೆರಳಿದ ಪ್ರೇಮಿಗಳು: ಪೊದೆಯಲ್ಲಿ ಏಕಾಂತದಲ್ಲಿದ್ದಾಗ ಯುವಕನ ಮೇಲೆ ಹುಲಿ ದಾಳಿ

- Advertisement -
- Advertisement -

ಮಹಾರಾಷ್ಟ್ರ: ಕಾಡಿನಲ್ಲಿ ಏಕಾಂತವಾಗಿ ಸಮಯ ಕಳೆಯಲು ತೆರಳಿದ ಪ್ರೇಮಿಗಳು, ಪೊದೆಯಲ್ಲಿ ಏಕಾಂತದಲ್ಲಿದ್ದಾಗ ಹುಲಿ ದಾಳಿ ಮಾಡಿ ಯುವಕ ಸಾವನ್ನಪ್ಪಿರುವ ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯದಲ್ಲಿ ನಡೆದಿದೆ.

ಚೋಪ್ (ಕೋರೆಗಾಂವ್) ನಿವಾಸಿ ಅಜಿತ್ ಸೋಮೇಶ್ವರ ನಾಕಾಡೆ (21) ಮೃತ ಯುವಕ. ಅಜಿತ್ ತನ್ನ ಪ್ರಿಯತಮೆಯೊಂದಿಗೆ ಕಾಡಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ನಂತರ ಈ ಕುರಿತಂತೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯುವಕನ ಶವವನ್ನು ಪತ್ತೆ ಹಚ್ಚಿದ್ದಾರೆ. ಯುವಕನ ಮುಖ ಮತ್ತು ಬೆನ್ನಿನ ಭಾಗವನ್ನು ಹುಲಿ ಸಂಪೂರ್ಣವಾಗಿ ತಿಂದು ಹಾಕಿದೆ.

ಇನ್ನೂ ಘಟನೆಯಲ್ಲಿ ಯುವತಿಗೂ ಕೂಡ ಗಂಭೀರ ಗಾಯಗೊಂಡಿದ್ದು, ಇದೀಗೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಗರದಿಂದ ಹೊರಗಡೆ 12 ಕಿ.ಮೀ ದೂರದಲ್ಲಿರುವ ಈ ಕಾಡಿನಲ್ಲಿ ಹುಲಿ ಇರುವ ಬಗ್ಗೆ ಗ್ರಾಮಸ್ಥರಿಗೆ ಮೊದಲೇ ಗೊತ್ತಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡ್‍ಗಳನ್ನು ಸಹ ಹಾಕಿದ್ದರು. ಆದರೂ ಅಜಿತ್ ತನ್ನ ವಾಹನವನ್ನು ನಿಲ್ಲಿಸಿ ಹುಡುಗಿಯನ್ನು ಕಾಡಿಗೆ ಕರೆದೊಯ್ದು, ನಂತರ ಪೊದೆಯೊಂದರಲ್ಲಿ ಏಕಾಂತದಲ್ಲಿದ್ದಾಗ ಏಕಾಏಕಿ ಹುಲಿ ಹಿಂದಿನಿಂದ ಬಂದು ದಾಳಿ ಮಾಡಿದೆ. ಈ ವೇಳೆ ಹುಲಿ ಬಾಯಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.

- Advertisement -

Latest News

error: Content is protected !!