ಪಡುಬಿದ್ರಿಯಲ್ಲಿ ಮಾದಕ ವ್ಯಸನದ ಅಮಲಿನಲ್ಲಿದ್ದ ವಿದ್ಯಾರ್ಥಿಗಳ ಗುಂಪು ಬೀದಿಗಿಳಿದ ನಂತರ ಗೊಂದಲದ ವಾತಾವರಣ ಉಂಟಾಯಿತು.
ಬಾಲಕಿ ಸೇರಿದಂತೆ ಮೂವರು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಪಡುಬಿದ್ರಿ ಪೇಟೆ ಮೂಲಕ ಒಂದೇ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಪೆಟ್ರೋಲ್ ಖಾಲಿಯಾಗಿದ್ದರಿಂದ ಸ್ಕೂಟರ್ ನಡುರಸ್ತೆಯಲ್ಲಿ ನಿಂತಿತು. ನಂತರ ವಿದ್ಯಾರ್ಥಿಗಳು ಸ್ಕೂಟರ್‌ನಿಂದ ಇಳಿದು ವಾಗ್ವಾದ ನಡೆಸಿದರು.
ವಿದ್ಯಾರ್ಥಿಗಳ ನಡುವಿನ ವಾಗ್ವಾದ ಮಾರಾಮಾರಿಯಾಗಿ, ಸ್ಥಳೀಯರು ಜಮಾಯಿಸಲು ಪ್ರಾರಂಭಿಸಿದರು. ಪೊಲೀಸರನ್ನೂ ಸ್ಥಳಕ್ಕೆ ಕರೆಸಲಾಗಿತ್ತು.
ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ವಿದ್ಯಾರ್ಥಿಗಳು ಅವರನ್ನು ಬಂಧಿಸಲು ಪ್ರಯತ್ನಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯರ ನೆರವಿನಿಂದ ಆ್ಯಂಬುಲೆನ್ಸ್ ಮೂಲಕ ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿರುವ ತಮಿಳುನಾಡಿನ ಚೆನ್ನೈ ಮೂಲದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.