Thursday, June 4, 2026
Homeಕರಾವಳಿಅಳಕೆಮಜಲು: ಸರಣಿ ಅಪಘಾತ, ವಾಹನಗಳು ಜಖಂ

ಅಳಕೆಮಜಲು: ಸರಣಿ ಅಪಘಾತ, ವಾಹನಗಳು ಜಖಂ

- Advertisement -
- Advertisement -

ವಿಟ್ಲ : ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಇನೋವಾ ಕಾರಿಗೆ ಹಾಗೂ ನಿಲ್ಲಿಸಿದ್ದ ಬೈಕ್ ಗಳಿಗೆ ಢಿಕ್ಕಿ ಹೊಡೆದು ಸರಣಿ ಅಪಘಾತವಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಅಳಕೆಮಜಲು ಎಂಬಲ್ಲಿ ನಡೆದಿದೆ.

ವಿಟ್ಲದಿಂದ ಪುತ್ತೂರು ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದು , ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೆ ಢಿಕ್ಕಿಯಾಗಿದೆ .

ಈ ಅಪಘಾತದ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಅಪಘಾತದಲ್ಲಿ ಎರಡು ಕಾರಿನ ಮುಂಭಾಗ ಜಖಂಗೊಂಡಿದೆ ಹಾಗೇ ಸ್ವಿಫ್ಟ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು , ಒಂದು ಆಕ್ಟಿವಾ , ಒಂದು ಬೈಕ್ ಜಖಂಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!