Friday, June 5, 2026
Homeಕರಾವಳಿಅರಬ್ಬೀ ಸಮುದ್ರದದ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

ಅರಬ್ಬೀ ಸಮುದ್ರದದ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ

- Advertisement -
- Advertisement -

ಕಾರವಾರ: ವೀಕೆಂಡ್ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಬಂದಿದ್ದ ಕುಟುಂಬವೊಂದು ಅರಬ್ಬೀ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುವ ಭೀತಿಯಲ್ಲಿದ್ದಾಗ ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ.

ಬೆಂಗಳೂರು ಕತ್ರೆಗುಪ್ಪೆ ನಿವಾಸಿಗಳಾದ ಕಮಲಮ್ಮ (40), ಸಂಜಯ್ (18), ಸಂಜನಾ (15) ಬಚಾವಾದ ಒಂದೇ ಕುಟುಂಬದ ಸದಸ್ಯರು. ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಗಮನಿಸಿದ ಓಷನ್ ಅಡ್ವಂಚರ್ ತಂಡ ರಕ್ಷಣೆ ಮಾಡಿದೆ.

ವಿಕೆಂಡ್ ಮಸ್ತಿಗಾಗಿ ಮುರ್ಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮೂವರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಇವರನ್ನು ಗಮನಿಸಿದ ಓಷಿಯನ್ ಅಡ್ವೆಂಚರ್ ಸಂಜೀವ್ ಹರಿಕಾಂತ್ ಹಾಗೂ ಚಂದ್ರಶೇಖರ ದೇವಾಡಿಗ ಎಂಬವರು ಬೋಟ್ ಮೂಲಕ ತೆರಳಿ ರಕ್ಷಿಸಿದ್ದಾರೆ.

- Advertisement -

Latest News

error: Content is protected !!