Thursday, June 25, 2026
Homeತಾಜಾ ಸುದ್ದಿಡಿ.ಕೆ.ಶಿವಕುಮಾರ್ ರ ಕಪ್ಪು ಹಣದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ವಂಚಿಸಿ ಲಕ್ಷಾಂತರ ರೂ.ನೊಂದಿಗೆ ಪರಾರಿಯಾದ...

ಡಿ.ಕೆ.ಶಿವಕುಮಾರ್ ರ ಕಪ್ಪು ಹಣದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ವಂಚಿಸಿ ಲಕ್ಷಾಂತರ ರೂ.ನೊಂದಿಗೆ ಪರಾರಿಯಾದ ಕಾಂಗ್ರೆಸ್ ನಾಯಕಿ..!

- Advertisement -
- Advertisement -

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ನ ಮಹಿಳಾ ಪ್ರಧಾನ ಕಾರ್ಯದರ್ಶಿಯೊಬ್ಬಾಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಪ್ಪು ಹಣದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ, ‘ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10,000 ಸಾವಿರ ಹಣವನ್ನು ನೀಡಿದರೆ ಡಿಕೆಶಿಯವರ ಕಪ್ಪು ಹಣದಿಂದ ಮನೆ ಮತ್ತು ಕಡಿಮೆ ಬಡ್ಡಿಗೆ ಸಾಲವನ್ನು ಕೊಡುತ್ತೇವೆ” ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಸುಮಾರು 35ಕ್ಕೂ ಹೆಚ್ಚು ಜನರಿಗೆ ಮಹಾಮೋಸ ಮಾಡಿರುವ ಆರೋಪಗಳು ಕೇಳಿಬಂದಿವೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ. ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆ. ಪೂರ್ಣಿಮಾರಿಂದ ವಂಚನೆಗೊಳಗಾದ ಅನೇಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್, ಪೂರ್ಣಿಮಾ ಸವದತ್ತಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.

- Advertisement -

Latest News

error: Content is protected !!