Thursday, June 4, 2026
Homeಕರಾವಳಿಸೌದಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವು

ಸೌದಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವು

- Advertisement -
- Advertisement -

ಮಂಗಳೂರು: ಸೌದಿ ಅರೇಬಿಯಾದಲ್ಲಿ ಸಂಭವಿಸಿರುವ ವಾಹನ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದ್ದು, ಮಂಗಳೂರು ಮೂಲದ ಅಕೀಲ್, ನಾಸಿರ್ ಮತ್ತು ರಿಝ್ವಾನ್ ಎಂಬವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ನಾಲ್ಕು ಜನರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮೃತದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತಪಟ್ಟವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅಕೀಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಎನ್ನಲಾಗಿದೆ.

- Advertisement -

Latest News

error: Content is protected !!