Friday, March 29, 2024
Homeತಾಜಾ ಸುದ್ದಿಪ್ರಕರಣವನ್ನು ಕಣ್ಣಾರೆ ಕಂಡವರು ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡ್ಬೇಕು: ಆಗ ಪ್ರಕರಣ ಭೇದಿಸಲು ಸುಲಭವಾಗುತ್ತೆ:...

ಪ್ರಕರಣವನ್ನು ಕಣ್ಣಾರೆ ಕಂಡವರು ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡ್ಬೇಕು: ಆಗ ಪ್ರಕರಣ ಭೇದಿಸಲು ಸುಲಭವಾಗುತ್ತೆ: ಡಿಜಿ ಪ್ರವೀಣ್ ಸೂದ್

spot_img
- Advertisement -
- Advertisement -

ಮಂಗಳೂರು: ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಷ್ಟೇ ನಾಗರಿಕರ ಜವಾಬ್ದಾರಿಯೂ ಇದೆ. ಆದ್ದರಿಂದ ಎಲ್ಲಾ ಸಮುದಾಯಗಳ, ಸಂಘಟನೆಗಳ ಮುಖಂಡರು ಪೊಲೀಸರೊಂದಿಗೆ ಕೈಜೋಡಿಸಿದ್ದಲ್ಲಿ ಎಲ್ಲಾ ಪ್ರಕರಣಗಳನ್ನು ಸುಲಭವಾಗಿ ಬೇಧಿಸಲು ಸಾಧ್ಯ ಎಂದು ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು,ಯಾವುದೇ ಪ್ರಕರಣಗಳಿರಲಿ ಅದನ್ನು ನೋಡಿದವರು, ಮಾಹಿತಿಯಿದ್ದ ನಾಗರಿಕರು ಇದ್ದೇ ಇರುತ್ತಾರೆ. ಅಂಥವರು ಮುಂದೆ ಬಂದು ಪೊಲೀಸ್ ಗೆ ಮಾಹಿತಿ ನೀಡಿದರೆ ಪ್ರಕರಣ ಭೇದಿಸಲು ಸುಲಭವಾಗುತ್ತದೆ. ಮಾಹಿತಿ ನೀಡದಿದ್ದಲ್ಲಿ ಅವರೂ ಇದರಲ್ಲಿ ಭಾಗಿದಾರರೆಂದು ನಾವು ತಿಳಿಯಬೇಕಾಗುತ್ತದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದರು. ದ.ಕ.ಜಿಲ್ಲೆಯಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣಗಳಲ್ಲಿ ಮಸೂದ್ ಹಂತಕರಲ್ಲಿ ಎಂಟು ಮಂದಿಯ ಅರೆಸ್ಟ್ ಆಗಿದೆ. ಪ್ರವೀಣ್ ಹಂತಕರಿಬ್ಬರ ಅರೆಸ್ಟ್ ಆಗಿದ್ದು, ತನಿಖೆ ಮುಂದಿವರಿದಿದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದರು.

- Advertisement -
spot_img

Latest News

error: Content is protected !!