Thursday, June 4, 2026
Homeಕರಾವಳಿನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಜಾರಿದ ಕಾರು, ತಪ್ಪಿದ ದುರಂತ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಜಾರಿದ ಕಾರು, ತಪ್ಪಿದ ದುರಂತ

- Advertisement -
- Advertisement -

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಇಳಿಜಾರಿಗೆ ಹೋದ ಘಟನೆ ಇಂದು ನಡೆದಿದೆ.

ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಇಳಿಯಿತು. ರಸ್ತೆಯ ಬದಿಯ ಪೊದೆಯಲ್ಲಿ ಕಾರು ಸಿಲುಕಿಕೊಂಡ ಕಾರಣ ಅಲ್ಲೇ ಹರಿಯುತ್ತಿರುವ ಗುಂಡ್ಯ ನದಿಗೆ ಕಾರು ಬೀಳದೆ ಪವಾಡಸದೃಶರಾಗಿ ಜೀವಹಾನಿಯಿದೆ ಪಾರಾಗಿದ್ದಾರೆ.

ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!