Friday, June 5, 2026
Homeಕರಾವಳಿನಾನು ತುಳು ಸಂಸ್ಕೃತಿ ಹಾಗೂ ದೈವಗಳ ಬಗ್ಗೆ ಟೀಕೆ ಮಾಡಿಲ್ಲ: ಆರಗ ಜ್ಞಾನೇಂದ್ರ

ನಾನು ತುಳು ಸಂಸ್ಕೃತಿ ಹಾಗೂ ದೈವಗಳ ಬಗ್ಗೆ ಟೀಕೆ ಮಾಡಿಲ್ಲ: ಆರಗ ಜ್ಞಾನೇಂದ್ರ

- Advertisement -
- Advertisement -

ಬೆಂಗಳೂರು: ನಾನು ತುಳು ಸಂಸ್ಕೃತಿ ಹಾಗೂ ದೈವಗಳ ಬಗ್ಗೆ ಟೀಕೆ ಮಾಡಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಸಂಘಟಿಸಿದ ʻಶಿವದೂತೆ ಗುಳಿಗ’ ನಾಟಕ ಪ್ರದರ್ಶನದ ಬಗ್ಗೆ ಮಾತನಾಡಿದ್ದ ಸಚಿವ ಆರಗ ಜ್ಞಾನೇಂದ್ರ, ಯಾವುದೋ ಗುಳಿಗೆ ಕೊಡ್ತಾರಂತೆ, ಜಪಾಲ್ ಗುಳಿಗೆ ಕೊಟ್ರು ಕೊಡಬಹುದು ಎಂದಿದ್ದಾರೆ. ಆದ್ರೆ ಗೃಹ ಸಚಿವರು ಕರಾವಳಿಗರ ಆರಾಧ್ಯ ದೈವ ಗುಳಿಗದ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಅದ್ರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಗುಳಿಗ ದೈವದ ಬಗ್ಗೆ ಮಾತನಾಡಿದ್ದಲ್ಲ. ಬದಲಾಗಿ ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದಿದ್ದಾರೆ.

- Advertisement -

Latest News

error: Content is protected !!