Thursday, June 4, 2026
Homeಕರಾವಳಿಉಡುಪಿಉಡುಪಿ: ಉದ್ಯಾವರ ಜಯಲಕ್ಷ್ಮೀ ಬಟ್ಟೆ ಮಳಿಗೆಯಿಂದ 60 ಲಕ್ಷ ರೂಪಾಯಿ ಕಳವು

ಉಡುಪಿ: ಉದ್ಯಾವರ ಜಯಲಕ್ಷ್ಮೀ ಬಟ್ಟೆ ಮಳಿಗೆಯಿಂದ 60 ಲಕ್ಷ ರೂಪಾಯಿ ಕಳವು

- Advertisement -
- Advertisement -

ಉಡುಪಿ: ಇಲ್ಲಿನ ಖ್ಯಾತ ಬಟ್ಟೆ ಮಳಿಗೆಯಿಂದ ಉದ್ಯಾವರ ಜಯಲಕ್ಷ್ಮೀ ಬಟ್ಟೆ ಮಳಿಗೆಯಿಂದ 60 ಲಕ್ಷ ರೂಪಾಯಿ ಕಳವು ಮಾಡಲಾಗಿದೆ.


ಮಾರ್ಚ್ 15 ರಂದು ಮುಂಜಾನೆ ಉದ್ಯಾವರ ಜಯಲಕ್ಷ್ಮೀ ಬಟ್ಟೆ ಅಂಗಡಿಯ ನೆಲಮಹಡಿಯ ವಾಶ್‌ರೂಂಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನ್‌ ಕಿತ್ತು ಅದರ ಮೂಲಕ ಬಟ್ಟೆ ಅಂಗಡಿಗೆ ನುಗ್ಗಿದ್ದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.


ಅಲ್ಲಿಂದ ಅಂಗಡಿಯ ನೆಲಮಹಡಿಯ ಕ್ಯಾಶ್ ಕೌಂಟರ್‌ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡು ಬಳಿಕ ಮಹಡಿಯ ಕಛೇರಿಗೆ ಬಂದು ಅಲ್ಲಿನ ಪಿಂಗರ್ ಪ್ರಿಂಟ್ ಇರುವ ಸೇಫ್ ಲಾಕರ್‌ನ ಕೀಯನ್ನು ತಂದು ಕಛೇರಿಯ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ ಹಣದ ಸೇಫ್ ಲಾಕರ್ ಕೀ ತೆಗೆದು ಅದರ ಮೂಲಕ ಹಣವಿಟ್ಟಿದ್ದ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ 60 ಲಕ್ಷ ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೋ ಪರಿಚಿತರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!