Friday, June 5, 2026
Homeಕರಾವಳಿಲಾಕ್​ಡೌನ್ ವೇಳೆ ಕುಪ್ಪೆಪದವು ಫ್ಯಾನ್ಸಿ ಅಂಗಡಿಯಲ್ಲಿ ಕಳ್ಳತನ

ಲಾಕ್​ಡೌನ್ ವೇಳೆ ಕುಪ್ಪೆಪದವು ಫ್ಯಾನ್ಸಿ ಅಂಗಡಿಯಲ್ಲಿ ಕಳ್ಳತನ

- Advertisement -
- Advertisement -

ಮಂಗಳೂರು: ನಗರದ ಕುಪ್ಪೆಪದವಿನ ಶ್ರೀ ರಾಮಕೃಷ್ಣ ಭಜನಾ ಮಂದಿರದ ಕಟ್ಟಡದಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ತಡರಾತ್ರಿ ರಾತ್ರಿ ಹಿಂಬದಿಯ ಕಿಟಕಿ ಬಾಗಿಲಿನ ಸರಳು ಮುರಿದು ನುಗ್ಗಿದ ಕಳ್ಳರು ಸುಮಾರು 10,000 ರೂ. ನಗದು ಹಾಗೂ 7,000 ರೂ. ಮೌಲ್ಯದ ಫ್ಯಾನ್ಸಿ ಬಟ್ಟೆಬರೆ ಕಳವುಗೈದಿದ್ದಾರೆ.

ಸುಮಿತ್ರಾ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಬಜ್ಪೆಪೊಲೀಸರು ಆಗಮಿಸಿ, ಸ್ಥಳೀಯ ಸಿಸಿ ಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.

- Advertisement -

Latest News

error: Content is protected !!