Friday, May 3, 2024
Homeಉದ್ಯಮರೈಲು ಪ್ರಯಾಣ : 200 ಪ್ರಯಾಣಿಕ ರೈಲುಗಳಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು

ರೈಲು ಪ್ರಯಾಣ : 200 ಪ್ರಯಾಣಿಕ ರೈಲುಗಳಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು

spot_img
- Advertisement -
- Advertisement -

ನವದೆಹಲಿ, ಮೇ 21: ಭಾರತದಲ್ಲಿ ಮಾರಕ ಕೋವಿಡ್ 19 ಲಾಕ್‌ಡೌನ್‌ ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಜೂನ್‌ 1 ರಿಂದ ದೇಶದೆಲ್ಲೆಡೆ ಸುಮಾರು 200 ಪ್ರಯಾಣಿಕ ರೈಲುಗಳು ಸಂಚಾರ ಆರಂಭಿಸಲಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮೇ 19 ರಂದು ತಿಳಿಸಿದ್ದರು . ಪ್ರತಿದಿನ 200 ನಾನ್ ಎಸಿ ರೈಲುಗಳು ಸಂಚರಿಸಲಿದ್ದು, ಈ ರೈಲುಗಳಿಗೆ ಮೇ 21ರ ಬೆಳಗ್ಗೆ 10 ಗಂಟೆಯಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.

ದೇಶದೆಲ್ಲೆಡೆ ಕೊರೊನ ಲಾಕ್ ಡೌನ್ 4.0 ಜಾರಿಯಲ್ಲಿರುವಾಗಲೇ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರ ಪೂರ್ಣಪ್ರಮಾಣದಲ್ಲಿ ಇನ್ನೂ ಸಂಚಾರ ಆರಂಭಿಸಿಲ್ಲ. ಹಂತ ಹಂತವಾಗಿ ಜನ್ ಶತಾಬ್ದಿ, ಸಂಪರ್ಕ್ ಕ್ರಾಂತಿ, ಡುರೊಂಟೋ ಎಕ್ಸ್ ಪ್ರೆಸ್ ಗಳು ಹಳಿಗಿಳಿಯಲಿವೆ. 200 ರೈಲುಗಳ ಪಟ್ಟಿಯನ್ನು ಇಲಾಖೆ ತನ್ನ ಟ್ವಿಟ್ಟರ್ನಲ್ಲಿ ಬಿಡಿಗಡೆ ಮಾಡಿದೆ .

- Advertisement -
spot_img

Latest News

error: Content is protected !!