Sunday, June 7, 2026
Homeಕರಾವಳಿಉಡುಪಿಉಡುಪಿ;ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಉಡುಪಿ;ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

- Advertisement -
- Advertisement -

ಉಡುಪಿ;ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ  ಶಿರ್ವದಲ್ಲಿ ನಡೆದಿದೆ.

ಕುತ್ಯಾರಿನ ಕೆ. ವಿವೇಕಾನಂದ ಆಚಾರ್ಯ ಎಂಬವರ ಶಿರ್ವ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್‌ಗೆ ಜೂ.6ರಂದು ಇಬ್ಬರು ಅಪರಿಚಿತರು ಚಿನ್ನವನ್ನು ಖರೀದಿ ಮಾಡುವ ನೆಪದಲ್ಲಿ ಬಂದಿದ್ದರು. ಅವರು ಮಲೆಯಾಳಂ ಮತ್ತು ತಮಿಳು ಭಾಷೆ ಮಾತನಾಡುತ್ತಿದ್ದರು. ಈ ವೇಳೆ ಅಂಗಡಿಯ ಕೆಲಸದವರಿಗೆ ತಿಳಿಯದಂತೆ ಇವರು ಟ್ರೇ ಯಲ್ಲಿದ್ದ 1,49,000ರೂ. ಮೌಲ್ಯದ 28.799 ಗ್ರಾಂ ಚಿನ್ನದ ನೆಕ್ಲೇಸನ್ನು ಕಿಸೆಯೊಳಗೆ ಹಾಕಿ ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜೂ.9ರಂದು ಪರಿಶೀಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!