Friday, June 5, 2026
Homeಅಪರಾಧತಾಯಿಯ ಕೆನ್ನೆಗೆ ಹೊಡೆದ ಮಗ, ತಾಯಿ ಸ್ಥಳದಲ್ಲೇ ಸಾವು !

ತಾಯಿಯ ಕೆನ್ನೆಗೆ ಹೊಡೆದ ಮಗ, ತಾಯಿ ಸ್ಥಳದಲ್ಲೇ ಸಾವು !

- Advertisement -
- Advertisement -

ಬೆಂಗಳೂರು: ಮಗನಿಂದಲೇ ತಾಯಿಯ ಕೊಲೆ ಆದ ಘಟನೆ ನಡೆದಿದೆ. ಮಾರತಹಳ್ಳಿ ಸಮೀಪದ ದೇವರ ಬಿಸನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ.

ಯಮುನಮ್ಮ (70) ಕೊಲೆಯಾದ ದುರ್ದೈವಿ. ಕುಡಿದ ಮತ್ತಿನಲ್ಲಿ ಜಗಳ ತೆಗೆದು ಮಗ ಅಂಬರೀಶ್ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿದ್ದಾನೆ. ಕುಡಿಯಲು ಹಣ ನೀಡುವಂತೆ ತಾಯಿ ಬಳಿ ಮಗ ಗಲಾಟೆ ಮಾಡಿದ್ದ. ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ತಾಯಿಯ ಕೆನ್ನೆಗೆ ಮಗ ಅಂಬರೀಶ್ ಹೊಡೆದಿದ್ದಾನೆ.

ತೀವ್ರ ಏಟು ಬಿದ್ದ ಕಾರಣ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!