ಉತ್ತರಕನ್ನಡ : ಕಾರವಾರದಲ್ಲಿ ಉದ್ಯಮಿ ವಿನಾಯಕ್ ಕೊಲೆಗೆ ಸುಪಾರಿ ನೀಡಿದ್ದ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 22 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಉದ್ಯಮಿ ವಿನಾಯಕರನ್ನು ಬೆಳ್ಳಂ ಬೆಳಿಗ್ಗೆ ಅವರ ಮನೆಯಲ್ಲೇ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಒಂದು ಕೊಲೆಗೆ ಸಂಬಂಧಪಟ್ಟಂತೆ ಕೊಲೆಗೆ ಸುಪಾರಿ ನೀಡಿದ್ದ ಮತ್ತೊಬ್ಬ ಉದ್ಯಮಿ ಇದೀಗ ಗೋವಾದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ಯಮಿ ಗುರುಪ್ರಸಾದ್ ರಾಣೆ ಕೊಲೆಗೆ ಸುಪಾರಿ ನೀಡಿದ್ದರು ಎಂದು ಆರೋಪಿಗಳು ಪೋಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಹಂತಕರ ಹೇಳಿಕೆಯ ಮೇಲೆ ಬಳಿಕ ಗೋವಾ ಮೂಲದ ಉದ್ಯಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಯಾವಾಗ ಹಂತಕರು ಗುರುಪ್ರಸಾದ್ ರಾಣೆ ಅವರ ಹೆಸರು ಹೇಳುತ್ತಿದ್ದಂತೆ ನಿನ್ನೆ ಗುರುಪ್ರಸಾದ ರಾಣೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮಿ ವಿನಾಯಕ್ ಹತ್ಯೆಗೆ ಸುಪಾರಿ ಕೊಟ್ಟ ಗುರುಪ್ರಸಾದ ರಾಣೆ ಗೋವಾದ ಮಾಂಡೋವಿ ನದಿಯಲ್ಲಿ ಇದೀಗ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .