Friday, October 4, 2024
Homeಕರಾವಳಿಉಡುಪಿಕಾರ್ಕಳ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ

ಕಾರ್ಕಳ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ

spot_img
- Advertisement -
- Advertisement -

ಕಾರ್ಕಳ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.

ಶಿರ್ಲಾಲಿನ ಲಕ್ಷ್ಮೀ ಅವರು ಸೆ. 16ರಂದು ಬೆಳಗ್ಗೆ 9.45ರ ಸುಮಾರಿಗೆ ಮನೆಯ ಬಾಗಿಲು ಹಾಕಿ ತನ್ನ ಅತ್ತೆಯನ್ನು ಬೀಡಿ ಬ್ರಾಂಚಿಗೆ ಬಿಡಲು ಸ್ಕೂಟರಿನಲ್ಲಿ ತೆರಳಿದ್ದರು. ಈ ವೇಳೆ ಅವರು ಮನೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ.

ಇದನ್ನು ಗಮನಿಸಿದ್ದ ಕಳ್ಳರು ಮನೆಗೆ ನುಗ್ಗಿ ಕಪಾಟಿನಲ್ಲಿರಿಸಿದ್ದ ಒಂದು ಮುಕ್ಕಾಲು ಪವನ್‌ನ ಪೆಂಡೆಂಟ್‌ ಚೈನ್‌ ಮತ್ತು 2 ಪವನ್‌ನ ಉಂಗುರ ಮತ್ತು ಅರ್ಧ ಪವನ್‌ನ ಕಿವಿಯೋಲೆ ಸೇರಿದಂತೆ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾ ರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!